ಮಂಗಳೂರು : ಇತ್ತೀಚೆಗೆ ನಿಧನರಾದ ಎಂ. ಲಕ್ಷ್ಮೀನಾರಾಯಣ ಭಟ್ ಅವರಿಗೆ ಹರಿಕಥಾ ಪರಿಷತ್ ಮಂಗಳೂರು ವತಿಯಿಂದ ಆಯೋಜಿಸಲಾದ ನುಡಿನಮನ ಕಾರ್ಯಕ್ರಮ ದಿನಾಂಕ 07 ಜೂನ್ 2025ರಂದು ಮಂಗಳೂರಿನ ಹೊಟೇಲ್ ವುಡ್ಲ್ಯಾಂಡ್ಸ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ವಕೀಲ, ಹರಿದಾಸ ಹಾಗೂ ಹರಿಕಥಾ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಕೆ. ಮಹಾಬಲ ಶೆಟ್ಟಿ ಮಾತನಾಡಿ “ಸಂತ ಭದ್ರಗಿರಿ ಅಚ್ಯುತದಾಸರಿಗೆ ಮೂರು ದಶಕಗಳ ಕಾಲ ತಬ್ಲಾ ಸಾಥಿಯಾಗಿ, ಆಪ್ತ ಸಹಾಯಕನಾಗಿ, ಮುಂದೆ ಹರಿಕಥಾ ಪರಿಷತ್, ಮಂಗಳೂರು ಇದರ ಪ್ರಾರಂಭದ ದಿನಗಳಲ್ಲಿ ಗೌರವ ಸಲಹೆಗಾರರಾಗಿ, ಉಪಾಧ್ಯಕ್ಷರಾಗಿ ಅಮೂಲ್ಯ ಸೇವೆ ಸಲದಲಿಸಿದ, ಕೊಡಿಯಾಲ್ ಬೈಲ್ ಲಕ್ಷ್ಮೀನಾರಾಯಣಿ ದೇವಸ್ಥಾನದ ಪ್ರಧಾನ ಅರ್ಚಕರೂ ಆದ ಎಂ. ಲಕ್ಷ್ಮೀನಾಯಣ ಭಟ್ ಅವರು ಹರಿಕಥಾ ರಂಗಕ್ಕೆ ಹಾಗೂ ಒಟ್ಟಾರೆಯಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಸಲ್ಲಿಸಿದ ಸೇವೆ ಅಪಾರವಾದುದು” ಎಂದರು
ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ಮಂಗಳೂರು ವಿಭಾಗದ ಸಂಚಾಲಕ ಸುಧಾಕರ ರಾವ್ ಪೇಜಾವರ, ಖಜಾಂಚಿ ಡಾ. ಎಸ್.ಪಿ. ಗುರುದಾಸ್, ಕಲಾವಿದರಾದ ರಾಜೇಂದ್ರ ಬೆಂಡೆ, ಮಂಗಲದಾಸ್ ಗುಲ್ವಾಡಿ, ಸತೀಶ ಕಾಮತ್ ಮತ್ತಿತರರು ನುಡಿನಮನ ಸಲ್ಲಿಸಿದರು.

