ಮಂಗಳೂರು : ಸಂಗೀತ್ ಭಾರತಿ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ‘ಲಯ ಲಾವಣ್ಯ’ ವಾದ್ಯ ಸಂಗೀತ ಕಾರ್ಯಕ್ರಮವನ್ನು ದಿನಾಂಕ 18 ಜನವರಿ 2026ರಂದು ಸಂಜೆ 6-00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ.
ವಿದ್ವಾನ್ ಅನೂರ್ ಅನಂತ ಕೃಷ್ಣ ಶರ್ಮಾ ಇವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ರಾಜ್ ಕಮಲ್ ನಾಗರಾಜ್, ಸುನಾದ್ ಅನೂರ್, ನಾಗೇಂದ್ರ ಪ್ರಸಾದ್, ಫಣೀಂದ್ರ ಎನ್., ಅನೂರ್ ವಿನೋದ್ ಶ್ಯಾಮ್, ಚಿದಾನಂದ, ಕೆ.ಜೆ. ದಿಲೀಪ್, ಗೋಪಿ ಶ್ರವಣ್, ಸುಮಧುರ್ ಅನೂರ್, ಅನೂರ್ ಪ್ರಭೋದ ಶ್ಯಾಮ್, ಸುದತ್ತ ಎಲ್.ಎಸ್. ಇವರುಗಳು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

