ಸಾಗರ : ‘ನಾ ಧಿನ್ ಧಿನ್ ನಾ ಹಿಂದೂಸ್ಥಾನೀ ತಬಲಾ ವಿದ್ಯಾಲಯ’ದ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ‘ಲಯವತ್ಸರ -2’ ದಿನಾಂಕ 03-12-2023ರಂದು ಸಾಗರದ ಸೇವಾ ಸಾಗರ ಶಾಲೆಯ ಅಜಿತ್ ಸಭಾಭವನದಲ್ಲಿ ನಡೆಯಲಿದೆ.
ಮುಂಜಾನೆ ಗಂಟೆ 9ರಿಂದ ಕುಮಾರಿ ನಂದಾ ಭಟ್ ಭೀಮನಕೋಣೆ ಇವರಿಂದ ಗಾಯನ. ಕುಮಾರ ಶ್ರೀಷ ದತ್ತಾತ್ರೇಯ ಮತ್ತು ಸುದೀಪ್ ಕೆ.ಎಂ. ಕಿಬ್ಬಚ್ಚಲು ತಬಲಾದಲ್ಲಿ ಹಾಗೂ ಕುಮಾರ ಸಂವತ್ಸರ ಸಾಗರ ಇವರು ಸಂವಾದಿನಿಯಲ್ಲಿ ಸಾಥ್ ನೀಡಲಿದ್ದಾರೆ. ಗಂಟೆ 10ರಿಂದ ವಿದ್ಯಾಲಯದ ವಿದ್ಯಾರ್ಥಿಗಳಿಂದ ತಬಲಾ ವಾದನ ಕಾರ್ಯಕ್ರಮ, ಅಪರಾಹ್ನ 12ರಿಂದ ಸಂತೂರ್-ಬಾನ್ಸುರಿ-ವಯೋಲಿನ್ ‘ತ್ರಿಗಲ್ ಬಂದಿ’ಯಲ್ಲಿ ಶ್ರೀಮತಿ ಸುಮಾ ಹೆಗಡೆ – ಸಂತೂರ್, ಶ್ರೀ ಸಮರ್ಥ ಹೆಗಡೆ – ಬಾನ್ಸುರಿ ಮತ್ತು ಶ್ರೀ ರಂಜನ್ ಕುಮಾರ್ ಬೇವುರ – ವಯೋಲಿನ್ ನುಡಿಸಲಿದ್ದಾರೆ. ವಿ. ಸಂತೋಷ್ ಆರ್. ಹೆಗಡೆ ಮತ್ತು ವಿ. ಶೌರಿ ಶಾನಭೋಗ್ ತಬಲಾ ಮತ್ತು ಪಖವಾಜ್ ಸಾಥ್ ನೀಡಲಿದ್ದಾರೆ.
ಗಂಟೆ 2.30ರಿಂದ ವಿದ್ಯಾಲಯದ ವಿದ್ಯಾರ್ಥಿಗಳಿಂದ ತಬಲಾ ವಾದನ ಕಾರ್ಯಕ್ರಮ, ಸಂಜೆ ಗಂಟೆ 6ರಿಂದ ಬೆಂಗಳೂರಿನ ಪಂ. ರವೀಂದ್ರ ಯಾವಗಲ್ ಇವರ ‘ತಬಲಾ ಸೋಲೋ’ಗೆ ಬೆಂಗಳೂರಿನ ಶ್ರೀ ರಂಜನ್ ಕುಮಾರ್ ಬೇವುರ ವಯೋಲಿನ್ ಸಾಥ್ ನೀಡಲಿದ್ದಾರೆ. ರಾತ್ರಿ ಗಂಟೆ 8ಕ್ಕೆ ಬೆಂಗಳೂರಿನ ವಿದುಷಿ ಭಾರತೀ ಪ್ರತಾಪ್ ಇವರ ‘ಹಿಂದೂಸ್ಥಾನೀ ಗಾಯನ’ಕ್ಕೆ ತಬಲಾದಲ್ಲಿ ಬೆಂಗಳೂರಿನ ಪಂ. ರವೀಂದ್ರ ಯಾವಗಲ್ ಮತ್ತು ಸಂವಾದಿನಿಯಲ್ಲಿ ಶ್ರೀ ಸತೀಶ್ ಭಟ್ ಹೆಗ್ಗಾರ್ ಸಾಥ್ ನೀಡಲಿದ್ದಾರೆ.