ಕುಶಾಲನಗರ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕುಶಾಲನಗರ ತಾಲೂಕು ಘಟಕ ಇವರ ಆಶ್ರಯದಲ್ಲಿ ಚೆರಿಯಮನೆ ದಿವಂಗತ ಕೃಷ್ಣಪ್ಪ ಮರಗೋಡ ಧತ್ತಿ ‘ಜಾನಪದ’ ಕುರಿತು ಉಪನ್ಯಾಸ ಕಾರ್ಯಕ್ರಮವು ದಿನಾಂಕ 27 ಫೆಬ್ರವರಿ 2025ರಂದು ಸಂಜೆ 06-00 ಗಂಟೆಗೆ ಕುಶಾಲನಗರ ಗುಮ್ಮನಕೊಲ್ಲಿ ಬೃಂದಾವನ ಬಡಾವಣೆಯಲ್ಲಿ ನಡೆಯಲಿದೆ.
ಕ.ಸಾ.ಪ. ಕುಶಾಲನಗರ ಇದರ ಅಧ್ಯಕ್ಷರಾದ ಕೆ.ಎಸ್. ನಾಗೇಶ್ ಇವರ ಅಧ್ಯಕ್ಷತೆಯಲ್ಲಿ ನಿವೃತ್ತ ಶಿಕ್ಷಕಿ ಶ್ರೀಮತಿ ಉಮಾದೇವಿ ಸೋಮಪ್ಪ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಶಿರಂಗಾಲ ಉಪನ್ಯಾಸಕರಾದ ಶ್ರೀ ಹಂಡರಂಗಿ ನಾಗರಾಜ್ ಇವರು ಉಪನ್ಯಾಸ ನೀಡಲಿದ್ದಾರೆ.