ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕ, ಡಾ. ಜಿ ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇವರ ಸಹಕಾರದಲ್ಲಿ ದಿ. ಪುಳಿಮಾರು ಎಂ. ಕೃಷ್ಣ ಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮ ದಿನಾಂಕ 11-11-2023ರ ಶನಿವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಪ್ರಸಿದ್ಧ ಉರಗ ತಜ್ಞ, ಸಾಹಿತಿ ಗುರುರಾಜ್ ಸನಿಲ್ ಮಾತನಾಡುತ್ತಾ “ಹಾವುಗಳ ಬಗ್ಗೆ ಬಹಳಷ್ಟು ತಪ್ಪು ನಂಬಿಕೆಗಳಿದ್ದು, ಅದನ್ನು ಹೋಗಲಾಡಿಸದಿದ್ದರೆ ಅದರ ಅಡ್ಡ ಪರಿಣಾಮ ಪರಿಸರ ಮತ್ತು ನಮ್ಮ ಮೇಲಾಗುವ ಸಾಧ್ಯತೆ ಇರುತ್ತದೆ. ಭಯವನ್ನು ಗೆಲ್ಲಲಿಕ್ಕೆ ಪ್ರಯತ್ನಿಸಿದರೆ ಖಂಡಿತ ಯಶಸ್ಸು ಸಾಧ್ಯ. ತಮ್ಮ ಜೀವನದಲ್ಲಿ ಪ್ರಾರಂಭದಿಂದಲೇ ಭಯವನ್ನು ಹೋಗಲಾಡಿಸಿಕೊಳ್ಳಲು ಪ್ರಯತ್ನಿಸಬೇಕು” ಎಂಬ ಕಿವಿ ಮಾತನ್ನು ವಿದ್ಯಾರ್ಥಿಗಳಿಗೆ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ್ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಆಡಿಗ , ಕೋಶಾಧಿಕಾರಿ ವಿ ಮನೋಹರ್ ,ದತ್ತಿ ದಾನಿಗಳಾದ ಭವಾನಿ ವಿ. ಶೆಟ್ಟಿ, ಶಾರದಾ ಶೆಟ್ಟಿ , ಕಲಾ ವಿಭಾಗದ ಡೀನ್ ಡಾ. ನಿಕೇತನ , ಉಪನ್ಯಾಸಕರಾದ ಸೋಜನ್ ಕೆ. ಜಿ., ಎನ್ ಎಸ್ ಎಸ್ ಸಂಚಾಲಕರಾದ ವಿದ್ಯಾಕುಮಾರಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಸಾಪ ಉಡುಪಿ ತಾಲೂಕು ಘಟಕದಿಂದ ನೀಡುವ ಯಕ್ಷ ಪ್ರೇಮಿ ನಾರಾಯಣ ದತ್ತಿ ಪುರಸ್ಕಾರವನ್ನು ಯಕ್ಷಗಾನ ಕಲಾವಿದೆ ಸಂಘಟಕಿ ನಿರೂಪಮ ಪ್ರಮೋದ್ ತಂತ್ರಿ ಕೊಡಂಕೂರು ಅವರಿಗೆ ನೀಡಿ ಗೌರವಿಸಲಾಯಿತು .
ಕ ಸಾ ಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ ಎಚ್. ಪಿ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು .ರಾಘವೇಂದ್ರ ಪ್ರಭು ಕರ್ವಾಲು ಪರಿಚಯಿಸಿದರು. ಕಸಾಪ ಉಡುಪಿ ತಾಲೂಕು ಗೌರವಾ ಕಾರ್ಯದರ್ಶಿ ಜನಾರ್ದನ ಕೊಡವೂರು ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Next Article ನಾಟಕ ವಿಮರ್ಶೆ | ಪುಟಾಣಿಗಳಿಗಾಗಿ ನಾಟಕ ಲಾ_ಪೋ_ಲಾ