ಬೆಂಗಳೂರು : ಜಂಗಮ ಕಲೆಕ್ಟಿವ್ ಬೆಂಗಳೂರು ಆಯೋಜಿಸುವ ‘ವಿಚಾರಕ್ರಾಂತಿ ಆಹ್ವಾನ – ಕುವೆಂಪು ಸಾಹಿತ್ಯದ ಪ್ರಸ್ತುತತೆ’ ಕಾರ್ಯಕ್ರಮವು ದಿನಾಂಕ 08 ಡಿಸೆಂಬರ್ 2024ರಂದು ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಬಿ. ಐ. ಸಿ. ಯಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ಘಂಟೆ 11-00ರಿಂದ 11- 30ರ ವರೆಗೆ ಮೈಸೂರಿನ ಮಾಯ್ಕಾರ ತಂಡದಿಂದ ಕುವೆಂಪು ಕಾವ್ಯಗಾಯನ, 11- 45 ರಿಂದ 1-30ರ ವರೆಗೆ ಇಂಗ್ಲೀಷ್ ಪ್ರಾಧ್ಯಾಪಕರು ಹಾಗೂ ರಾಜಕೀಯ ಚಿಂತಕರಾದ ವಿ. ಎಲ್. ನರಸಿಂಹಮೂರ್ತಿ ಇವರ ಸಂಯೋಜನೆಯಲ್ಲಿ ಲೇಖಕರು ಹಾಗೂ ಕನ್ನಡ ಅಧ್ಯಾಪಕರಾದ ಡಾ: ರವಿಕುಮಾರ್ ಬಾಗಿ ಇವರಿಂದ ‘ಕುವೆಂಪು ವೈಚಾರಿಕತೆಯ ಕುರಿತು ಮಾತು’ ಹಾಗೂ ಕವಿ ಮತ್ತು ಪ್ರಕಾಶಕರಾದ ಅಕ್ಷತ ಹುಂಚದಕಟ್ಟೆ ಇವರಿಂದ ‘ಕುವೆಂಪು ಕವಿತೆ ಮತ್ತು ಆತ್ಮಕತೆ ಕುರಿತು ಮಾತು’ ಕಾರ್ಯಕ್ರಮಗಳು ನಡೆಯಲಿವೆ.
ಅಪರಾಹ್ನ 2-30 ರಿಂದ 3-30ರ ವರೆಗೆ ಪ್ರಶಸ್ತಿ ವಿಜೇತ ನಟ ಮತ್ತು ಸಂಗೀತಗಾರರಾದ ಸಂತೋಷ್ ದಿಂಡಗೂರು ಇವರಿಂದ ‘ಮಲೆಗಳಲ್ಲಿ ಮದುಮಗಳು’ ಆಯ್ದಭಾಗಗಳ ಓದು, ಸಂಜೆ ಘಂಟೆ 3-30 ರಿಂದ 5-00ರ ವರೆಗೆ ಹುಲಿಕುಂಟೆಮೂರ್ತಿ ಇವರ ಸಂಯೋಜನೆಯಲ್ಲಿ ಕವಿ ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಇವರಿಂದ ‘ಕುವೆಂಪು ಸಾಹಿತ್ಯದ ತಾತ್ವಿಕನೋಟ’ ಹಾಗೂ ಸಂಜೆ ಘಂಟೆ 5-00 ರಿಂದ 6-00ರ ವರೆಗೆ ಚ ಕಾನೂನು ಹೆಗ್ಗಡತಿ ಆಯ್ದ ಭಾಗಗಳ ಓದು ಕಾರ್ಯಕ್ರಮ ನಡೆಯಲಿದೆ.