ಪುತ್ತೂರು : ‘ಬಹುವಚನಂ’ ಪುತ್ತೂರು ಆಯೋಜಿಸುವ ‘ಭೂತಾರಾಧನೆ’ ಪ್ರಸ್ತುತ ಪರಿಸ್ಥಿತಿ ಯಲ್ಲಿನ ವರ್ತಮಾನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ದಿನಾಂಕ 14 ಸೆಪ್ಟೆಂಬರ್ 2025ರ ರವಿವಾರದಂದು ಪುತ್ತೂರು ದರ್ಬೆಯ ವಿದ್ಯಾನಗರದಲ್ಲಿರುವ ಪದ್ಮನೀ ಸಭಾಭವನದಲ್ಲಿ ನಡೆಯಲಿದೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜು ಉಜಿರೆ ಇಲ್ಲಿನ ಉಪನ್ಯಾಸಕರು ಹಾಗೂ ದೈವ ನರ್ತಕರಾದ ಡಾ. ರವೀಶ್ ಪಡುಮಲೆ ಇವರು ಭೂತಾರಾಧನೆಯ ಕುರಿತು ಉಪನ್ಯಾಸ ನೀಡಲಿದ್ದಾರೆ.

