ಮಂಗಳೂರು : ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ವತಿಯಿಂದ ಆಯೋಜಿಸಲಾದ “ಕರ್ನಾಟಕದಲ್ಲಿ ಹಿಂದುಸ್ತಾನಿ ಸಂಗೀತ ಮತ್ತು ಅದರ ಬೆಳವಣಿಗೆ’ ವಿಷಯದ ಉಪನ್ಯಾಸ ಕಾರ್ಯಕ್ರಮವು ದಿನಾಂಕ 04-03-2024 ರಂದು ಮಂಗಳೂರಿನ ಕೊಡಿಯಾಲಬೈಲಿನಲ್ಲಿರುವ ‘ಅಭಿನವ ಸ್ವರ ಶಾಲಾ’ದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಯಾದ ಎಚ್.ಎಸ್. ಕೇಶವ ಮಾತನಾಡಿ “ಸಂಗೀತ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಶಾಸ್ತ್ರೀಯ ಸಂಗೀತದ ಅಭಿರುಚಿ ಮತ್ತು ಪ್ರವೀಣತೆ ಹೆಚ್ಚಿಸುತ್ತವೆ ಮತ್ತು ಉತ್ತಮ ಸಂಸ್ಕಾರವನ್ನು ನೀಡುತ್ತವೆ. ಶುದ್ಧ ಶಾಸ್ತ್ರೀಯ ಸಂಗೀತ ಪರಂಪರೆಗೆ ಅವಶ್ಯವಿರುವ ಶೈಕ್ಷಣಿಕ ಶಿಸ್ತನ್ನು ಸಹ ಅಳವಡಿಸುವುದು ಅತಿ ಮುಖ್ಯ. ನಮ್ಮ ದೇಶದ ಸಂಗೀತ ಅದರ ಪರಂಪರೆ ಅವುಗಳನ್ನು ಅರಿಯುವುದು ಪ್ರತಿಯೊಬ್ಬ ಸಂಗೀತಾರ್ಥಿಗಳ ಜವಾಬ್ದಾರಿ ಎಂದರು.”
ಸಂಸ್ಥೆಯ ಅಧ್ಯಕ್ಷೆ ಲೋಲಾಕ್ಷಿ, ಸಂಸ್ಥಾಪಕ ಕಾರ್ಯದರ್ಶಿ ಅಮಿತ್ ಬೆಂಗ್ರೆ, ಸದಸ್ಯರಾದ ಸಂದೇಶ್ ಕಾಮತ್, ಸಂತೋಷ್ ಉಪಸ್ಥಿತರಿದ್ದರು. ಪ್ರೇಮನಾಥ ಆಚಾರ್ಯ ನಿರೂಪಿಸಿದರು.