ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ, ಕರ್ನಾಟಕ ಲೇಖಕಿಯರ ಸಂಘ (ರಿ) ಚಾಮರಾಜಪೇಟೆ ಬೆಂಗಳೂರು ಮತ್ತು ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಲೇಖ ಲೋಕ 9’ ಲೇಖಕಿಯರ ಬದುಕು ಮತ್ತು ಬರಹ ಕುರಿತ ಕಾರ್ಯಕ್ರಮವು ದಿನಾಂಕ 29-08-2023 ಮತ್ತು 30-08-2023ರಂದು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ದಿನಾಂಕ 29-08-2023ರಂದು ಬೆಳಿಗ್ಗೆ 10 ಘಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿಯ
ಕುಲಪತಿಗಳಾದ ಪ್ರೊ. ಜಯರಾಜ್ ಅಮೀನ್ ಇವರು ಉದ್ಘಾಟಿಸಲಿರುವರು. ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಖ್ಯೆ, ಮಂಗಳಗಂಗೋತ್ರಿಯ ಅಧ್ಯಕ್ಷರಾದ ಪ್ರೊ. ಸೋಮಣ್ಣನವರು ಅಧ್ಯಕ್ಷತೆ ವಹಿಸಲಿದ್ದು, ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪರವರು ಆಶಯ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಯಾದ ಡಾ. ಸಬಿಹಾ ಭೂಮಿಗೌಡ ಮತ್ತು ಮಂಗಳೂರು ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳಾಯಿರು ಭಾಗವಹಿಸಲಿದ್ದಾರೆ.
ಲೇಖಕಿಯರ ಬದುಕು ಮತ್ತು ಬರಹ ಕುರಿತ ಕಾರ್ಯಕ್ರಮದಲ್ಲಿ ಉಷಾ ಪಿ. ರೈ ಮಂಗಳೂರು, ಪಾರ್ವತಿ ಜಿ. ಐತಾಳ್ ಉಡುಪಿ, ಡಾ. ವಸುಂಧರಾ ಭೂಪತಿ ಬೆಂಗಳೂರು, ಡಾ. ಎಂ.ಎಸ್. ಆಶಾದೇವಿ ಬೆಂಗಳೂರು, ಸುನಂದಾ ಕಡಮೆ ಹುಬ್ಬಳ್ಳಿ, ಡಾ. ತಮಿಳು ಸೆಲ್ವಿ ಚೆನ್ನೈ, ಡಾ. ಶೋಭಾ ನಾಯಕ ಬೆಳಗಾವಿ, ಬಿ.ಟಿ. ಜಾಹ್ನವಿ ದಾವಣಗೆರೆ, ಮಾಧವಿ ಭಂಡಾರಿ ಕೆರೆಕೋಣ ಶಿರಸಿ, ಇಂದಿರಾ ಶಿವಣ್ಣ ಬೆಂಗಳೂರು ಮತ್ತು ಎಂ. ಜಾನಕಿ ಬ್ರಹ್ಮಾವರ ಉಡುಪಿ ಈ ಎಲ್ಲಾ ಲೇಖಕಿಯರು ಭಾಗವಹಿಸಲಿದ್ದಾರೆ.
ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ, ಕರ್ನಾಟಕ ಲೇಖಕಿಯರ ಸಂಘ (ರಿ) ಬೆಂಗಳೂರು ಮತ್ತು ಕರಾವಳಿ ಲೇಖಕಿಯರ ವಾಚಕಿಯರ ಸಂಘ (ರಿ.) ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು, ಮಂಗಳೂರು ಇದರ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಎಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ.