ಉಡುಪಿ : ಭಾರತೀಯ ಅಂಚೆ ಇಲಾಖೆಯ ವತಿಯಿಂದ ನವ ಭಾರತದ ನಿರ್ಮಾಣಕ್ಕಾಗಿ ಡಿಜಿಟಲ್ ಇಂಡಿಯಾ (ಡಿಜಿಟಲ್ ಇಂಡಿಯಾ ಫಾರ್ ನ್ಯೂ ಇಂಡಿಯಾ) ಎಂಬ ವಿಷಯದ ಕುರಿತು 18 ವರ್ಷ ಒಳಗಿನವರಿಗೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಮುಕ್ತವಾಗಿ ಭಾಗವಹಿಸಲು ಪತ್ರ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧಾಳುಗಳು ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಅಂತರ್ದೇಶಿಯ ಪತ್ರದಲ್ಲಿ ಐದು ನೂರು ಶಬ್ದಗಳಿಗೆ ಮೀರದಂತೆ ಅಥವಾ ಎ4 ಹಾಳೆಯಲ್ಲಿ ಒಂದು ಸಾವಿರ ಶಬ್ದಗಳು ಮೀರದಂತೆ ಲೇಖನವನ್ನು ಕೈಬರಹದಲ್ಲಿ ಬರೆದು, ಅಂಚೆ ಲಕೋಟೆಯಲ್ಲಿ (ಎನ್ವಲಪ್) ಹಾಕಿ, ಅಕ್ಟೋಬರ್ 31ರೊಳಗೆ ಮಾನ್ಯ ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ ಇವರಿಗೆ ಸಲ್ಲಿಸಬೇಕು.
ಲೇಖನವನ್ನು ಬರೆಯುವಾಗ ಸ್ಪರ್ಧಾಳುಗಳು ತಮ್ಮ ಲೇಖನವನ್ನು ಚೀಫ್ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ವೃತ್ತ, ಬೆಂಗಳೂರು-560001 ಇವರಿಗೆ ಉದ್ದೇಶಿಸಿ ಬರೆಯಬೇಕಾಗಿದ್ದು, ಲಕೋಟೆ ಮೇಲೆ ‘ಢಾಯೀ ಆಕರ್’ ಎಂದು ನಮೂದಿಸಿ, ಅದರೊಂದಿಗೆ 18 ವರ್ಷ ಮೇಲಿನವರು ಮತ್ತು 18 ವರ್ಷ ಕೆಳಗಿನವರೆಂಬ ಮಾಹಿತಿಯನ್ನು ಸ್ಪಷ್ಟವಾಗಿ ಬರೆದು ಸಲ್ಲಿಸಬಹುದು.
ಮಾಹಿತಿಗಾಗಿ ಅಂಚೆ ಕಚೇರಿ ದೂ.ಸಂ. 0820-2521780 ಅಥವಾ ವೆಬ್ ಸೈಟ್ www.indiapost.gov.in ಹಾಗೂ www.karnatakapost.gov.in ಸಂಪರ್ಕಿಸಬಹುದು ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.