ಉಡುಪಿ : ಲಕ್ಷ್ಮೀ ಗುರುರಾಜ್ ಎನ್.ಎನ್.ಯು. (ರಿ.) ಇದರ ಪಂಚ ತ್ರಿಂಶತ್ ಉತ್ಸವದ ಅಂಗವಾಗಿ ಆಯೋಜಿಸುತ್ತಿರುವ ‘ನೃತ್ಯ ರಂಗದಲ್ಲಿ ಬೆಳಕಿನ ವಿನ್ಯಾಸ’ ನೃತ್ಯ ಗುರುಗಳಿಗೆ ಮತ್ತು ವಿದ್ವತ್ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರವು ದಿನಾಂಕ 20 ಜುಲೈ 2025ರಂದು ಬೆಳಗ್ಗೆ 10-30 ಗಂಟೆಗೆ ಉಡುಪಿಯ ಕುಂಜಿಬೆಟ್ಟು ಯಕ್ಷಗಾನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಲಿದೆ.
ಒಡಿಸ್ಸಿ ನೃತ್ಯ ಗುರುಗಳಾದ ಶ್ರೀ ಉದಯ್ ಕುಮಾರ್ ಶೆಟ್ಟಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಆಸಕ್ತರು ವಿದುಷಿ ಶ್ರೀವಿದ್ಯಾ ಸಂದೇಶ್ 98445 51114 ಮತ್ತು ಶ್ರೀಮತಿ ಶ್ರೀಲಲಿತಾ ಪ್ರವೀಣ್ 94818 43935 ಸಂಖ್ಯೆಯನ್ನು ಸಂಪರ್ಕಿಸಿರಿ.