ಉಡುಪಿ : ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಆಶ್ರಯದಲ್ಲಿ ಮಾರ್ಚ್ ತಿಂಗಳಲ್ಲಿ ಉಡುಪಿಯಲ್ಲಿ ಜರಗುವ ಮಹಿಳಾ ಸಮಾವೇಶದ ಪೂರ್ವಭಾವಿಯಾಗಿ ಲಿಂಗ ಸಂವೇದನೆಯ ಜಾಗೃತಿ ಕಾರ್ಯಕ್ರಮ ‘ಅರಿವಿನ ಪಯಣ’ ಉಡುಪಿಯ ಸುತ್ತಾ ಮುತ್ತ ದಿನಾಂಕ 21-11-2023ರಂದು ಜರಗಿತು. ಹಾಡು, ಕಿರುನಾಟಕ, ಕತೆ ಹೇಳುವುದು ಮತ್ತು ಸಂವಾದದ ಮೂಲಕ ಸುಮಾರು ಒಂದೂವರೆ ಗಂಟೆಗಳ ಕಾಲ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಸಹಕಾರಿಯಾಯಿತು.
ಈ ಕಾರ್ಯಕ್ರಮದಲ್ಲಿ ಅಖಿಲಾ ವಿದ್ಯಾಸಂದ್ರ, ಗೌರಿ, ಪ್ರಭಾ ಬೆಳವಂಗಲ, ಲಿನೆಟ್, ಮಲ್ಲಿಕಾ ಜ್ಯೋತಿಗುಡ್ಡೆ, ಲಾವಣ್ಯ ಬಂಟ್ವಾಳ, ಶುಭಲಕ್ಷ್ಮೀ ಕಡೆಕಾರ್, ಡಾ. ಸುನೀತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಚಂದ್ರಿಕಾ ಶೆಟ್ಡಿ, ಜಾನಕಿ ಬ್ರಹ್ಮಾವರ, ಮೇರಿ ಡಿ’ಸೋಜಾ, ಉದ್ಯಾವರ ನಾಗೇಶ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆಯೋಜಕರಾಗಿ ಉಡುಪಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಮಾ ಎಸ್. ಉಡುಪಿ, ಕ್ರಿಶ್ಚಿಯನ್ ಪ್ರೌಢ ಶಾಲೆಯ ಮುಖೋಪಾಧ್ಯಾಯಿನಿ ಶ್ರೀಮತಿ ಜೋಸ್ಲಿನ್ ಮಣಿಪಾಲ ಮತ್ತು ಎಸ್.ಎಸ್.ಎಲ್.ಸಿ. ನಂತರದ ಸರಕಾರಿ ನರ್ಸಿಂಗ್ ವಿದ್ಯಾರ್ಥಿಗಳ ವಸತಿ ನಿಲಯದ ವಾರ್ಡನ್ ಶ್ರೀಮತಿ ಸುನೀತಾ ಸಹಕರಿಸಿದರು.