ಬೆಂಗಳೂರು : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಮತ್ತು ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.) ಇವುಗಳ ಸಹಯೋಗದಲ್ಲಿ 69 ಣೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ‘ಕರ್ನಾಟಕ ರಾಜ್ಯ ವಕೀಲರ ಸಾಹಿತ್ಯ ಸಮ್ಮೇಳನ – 2024’ವನ್ನು ದಿನಾಂಕ 07 ಡಿಸೆಂಬರ್ 2024ರಂದು ಬೆಳಿಗ್ಗೆ 9-00 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ವೃತ್ತಿಪರ ಮತ್ತು ನಿವೃತ್ತ ವಕೀಲರಿಗೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮಗಳು ನಡೆಯಲಿದೆ.
ಜಾಗೃತಿ ಟ್ರಸ್ಟ್ ಮತ್ತು ರೋಟರಿ ಕ್ಲಬ್ ಇದರ ಅಧ್ಯಕ್ಷರಾದ ಶ್ರೀ ಬಿ. ನಾಗೇಶ್ ಇವರಿಂದ ಮೆರವಣಿಗೆಗೆ ಚಾಲನೆ, ಕವಯತ್ರಿ ಶ್ರೀಮತಿ ವಿಜಯಲಕ್ಷ್ಮೀ ದೊಡ್ಡಮನೆ ಇವರಿಂದ ಪುಸ್ತಕ ಮಳಿಗೆ ಉದ್ಘಾಟನೆ ಹಾಗೂ ಭಾರತೀಯ ಸ್ತ್ರೀ ಶಕ್ತಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಭಾಗ್ಯ ಸರವನ್ ಇವರಿಂದ ಭುವನೇಶ್ವರಿಗೆ ಪುಷ್ಪಾರ್ಚನೆ ನಡೆಯಲಿದೆ. ವಕೀಲರಾದ ಶ್ರೀ ನಂಜಪ್ಪ ಕಾಳೇಗೌಡ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ವಕೀಲರಾದ ಶ್ರೀ ಪ್ರಕಾಶ ವಸ್ತ್ರದ ಈ ಸಮ್ಮೇಳನದ ಉದ್ಘಾಟನೆ ಮಾಡಲಿರುವರು. ಇದೇ ಸಂದರ್ಭದಲ್ಲಿ ಶ್ರೀಮತಿ ವಿಶಾಲಾ ಆರಾಧ್ಯ ಇವರ ‘ನಾನೀ’ ಕವನ ಸಂಕಲನ ಕೃತಿ ಮತ್ತು ಶ್ರೀಮತಿ ಪ್ರತಿಮಾ ಹಾಸನ ಇವರ ‘ಪ್ರತಿಮಾವಲೋಕನ’ ಕೃತಿ ಬಿಡುಗಡೆಗೊಳ್ಳಲಿದೆ. ಜಾನಪದ ಗಾಯಕರಾದ ಡಾ. ಅಂಬುಜಾಕ್ಷಿ ಬಿರೇಶ್ ಇವರಿಂದ ಪ್ರಾರ್ಥನೆ, ಕುಮಾರಿ ವರ್ಷ ಶ್ರೀನಿವಾಸ್ ಮತ್ತು ಕುಮಾರಿ ಅನ್ವಿತಾ ಪ್ರಿಯದರ್ಶಿನಿಯವರಿಂದ ಭರತನಾಟ್ಯ ಹಾಗೂ ಶ್ರೀ ಶೈಲೇಶ್ ಕಾಕೋಳು ಮತ್ತು ತಂಡದವರಿಂದ ಹಾಗೂ ಶ್ರೀ ನರಸಿಂಹಮೂರ್ತಿ ಎನ್. ಕುಣಿಗಲ್ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಯಾದ ಶ್ರೀ ರಾಂ.ಕೆ. ಹನುಮಂತಯ್ಯ ವಹಿಸಲಿದ್ದು, ಸಾಹಿತಿ ಡಾ. ರಾಮಲಿಂಗೇಶ್ವರಾ ಇವರು ಸಮ್ಮೇಳನಾಧ್ಯಕ್ಷರ ಬದುಕು ಬರಹದ ಬಗ್ಗೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬಳಿಕ ಮೇಘಮೈತ್ರಿ ಪುಸ್ತಕ ಪ್ರಶಸ್ತಿ, ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.