ಮಂಗಳೂರು : ಮಂಗಳೂರಿನ ಅಕ್ಕ ಮಹಾದೇವಿ ಮಹಿಳಾ ಮಂಡಳಿ 04 ಜನವರಿ 2025ರಂದು ಆಯೋಜಿಸುವ ‘ವಚನ ಸಾಹಿತ್ಯ ಸಮ್ಮೇಳನ 2024-25’ ಇದರ ಲಾಂಛನದ ಲೋಕಾರ್ಪಣಾ ಸಮಾರಂಭವು ದಿನಾಂಕ 04 ಡಿಸೆಂಬರ್ 2024ರ ಬುಧವಾರದಂದು ಮಂಗಳೂರಿನ ಶ್ರೀಕೃಷ್ಣ ಸಂಕೀರ್ಣಸಲ್ಲಿರುವ ಮಹಿಳಾ ಮಂಡಳಿಯ ಸ್ವಾಗತ ಸಮಿತಿಯ ಕಛೇರಿಯಾದ ಕಲ್ಕೂರ ಪ್ರತಿಷ್ಠಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಲಾಂಛನ ಬಿಡುಗಡೆಗೊಳಿಸಿದ ಮಂಗಳೂರು ತಾಲೂಕು ಮಹಿಳಾಮಂಡಲಗಳ ಒಕ್ಕೂಟದ ಅಧ್ಯಕ್ಷ್ಯೆಯಾದ ಶ್ರೀಮತಿ ಚಂಚಲ ತೇಜೋಮಯ ಮಾತನಾಡಿ “ವಚನ ಸಾಹಿತ್ಯಗಳಿಗೆ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇದೆ. ಇಂತಹ ಸಮ್ಮೇಳನಗಳನ್ನು ಮಾಡುವುದರಿಂದ ಮುಂದಿನ ಪೀಳಿಗೆಗೆ ವಚನ ಸಾಹಿತ್ಯ ಹಾಗೂ ತತ್ವ ಸಿದ್ಧಾಂತಗಳನ್ನು ತಿಳಿಸಿಕೊಟ್ಟಂತಾಗುತ್ತದೆ. ತಾವು ಮಾಡಲು ಹೊರಟಿರುವ ಈ ಕಾರ್ಯಕ್ರಮ ಯಶಸ್ವಿಯಾಗಲಿ.” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಊರ್ವಸ್ಟೋರ್ ಶ್ರೀಮಹಾ ಗಣಪತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಸುರೇಂದ್ರ ರಾವ್, ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘ ಇದರ ಅಧ್ಯಕ್ಷ್ಯೆಯಾದ ಶ್ರಿಮತಿ ಸುಮಾ ಅರುಣ್ ಮಾನ್ವಿ, ಮಾಜಿ ಮ. ನ. ಪಾ. ಸದಸ್ಯರಾದ ಶ್ರೀ ರಾಧಾ ಕೃಷ್ಣ, ಲಾಂಛನ ವಿನ್ಯಾಸಗೊಳಿಸಿದ ಸಂತ ಅಲೋಷಿಯಸ್ ಪ್ರೌಢ ಶಾಲೆ ಮಂಗಳೂರು ಇಲ್ಲಿನ ಕಲಾ ಶಿಕ್ಷಕರಾದ ಶ್ರೀ ಜಾನ್ ಚಂದ್ರನ್, ನಿವೃತ್ತ ಉಪನ್ಯಾಸಕಿ ಹಾಗೂ ಹಿರಿಯ ಲೇಖಕಿಯಾದ ಶ್ರೀಮತಿ ಮೀನಾಕ್ಷಿ ರಾಮಚಂದ್ರ, ನಿವೃತ್ತ ಶಿಕ್ಷಕಿ ಶ್ರೀಮತಿ ರತ್ನಾವತಿ ಜೆ. ಬೈಕಾಡಿ, ಶ್ರಿಮತಿ ಜಯಶ್ರೀ, ಶ್ರಿಮತಿ ಪೂರ್ಣಿಮಾ ಪೇಜಾವರ, ಶ್ರಿಮತಿ ಸುಮಾ ಪ್ರಸಾದ್, ಶ್ರಿಮತಿ ಆಶಾ ಜಯದೇವ್, ಶ್ರೀಮತಿ ಶಕುಂತಲಾ, ಶ್ರೀಮತಿ ಚಂದ್ರಕಲಾ, ಶ್ರಿಮತಿ ಭಾಗ್ಯಶ್ರೀ, ಶ್ರೀಅರುಣ್ ಮಾನ್ವಿ, ಶ್ರೀ ಬಸವರಾಜ್, ಶ್ರೀ ವಸಂತ್, ಶ್ರೀ ಮಲ್ಲಿಕಾರ್ಜುನ ಬಸವನ ಗುಡಿ, ಶ್ರೀ ಪ್ರಜ್ವಲ್ ಮಾನ್ವಿ ಉಪಸ್ಥಿತರಿದ್ದರು.
ಶ್ರಿಮತಿ ಸುರೇಖಾ ಯಾಳವಾರ ಸ್ವಾಗತಿಸಿ, ಶ್ರಿಮತಿ ಮಣಿಶಂಕರ್ ಕಾರ್ಯಕ್ರಮ ನಿರೂಪಿಸಿ, ಶ್ರಿಮತಿ ಉಮಾ ಪಾಲಕ್ಷಪ್ಪ ವಂದಿಸಿದರು.