ಅಂಕೋಲಾ : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ದಿನಾಂಕ 25 ಫೆಬ್ರವರಿ 2025ರಂದು ಅಂಕೋಲಾ ತಾಲೂಕಿನಲ್ಲಿ ನಡೆಯಲಿರುವ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮವು ದಿನಾಂಕ 11 ಫೆಬ್ರವರಿ 2025ರಂದು ಅಂಕೋಲಾದ ನಾಡವರ ಸಭಾಭವನದಲ್ಲಿ ನಡೆಯಿತು.
ಅಂಕೋಲಾ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರ ಭಟ್ ಇವರು ಲಾಂಛನವನ್ನು ಬಿಡುಗಡೆಗೊಳಿಸಿ “ಅಂಕೋಲಾ ಸಾಹಿತ್ಯದ ತವರೂರು. ಈ ಲಾಂಛನವು ಅಂಕೋಲಾದ ಸಮಗ್ರತೆಯನ್ನು ಬಿಂಬಿಸುವ ಹಾಗೂ ಗೌರವ ತಂದುಕೊಟ್ಟ ಸಂಗತಿಗಳ ಸಮ್ಮಿಶ್ರಣವಾಗಿದ್ದು, ಅತ್ಯಂತ ಸುಂದರವಾಗಿ ರಚಿತವಾಗಿದೆ. ಆದ್ದರಿಂದ ಸಮ್ಮೇಳನ ಸಹ ಸಮಗ್ರತೆಯಿಂದ ಕೂಡಿರಲಿದ್ದು ಅದನ್ನು ನಾವೆಲ್ಲರೂ ಯಶಸ್ವಿಗೊಳಿಸಬೇಕಾಗಿದೆ” ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ ಸ್ವಾಗತಿಸಿ, ಕ.ಸಾ.ಪ. ತಾಲೂಕು ಕಾರ್ಯದರ್ಶಿ ಜಗದೀಶ ನಾಯಕ ವಂದಿಸಿದರು. ಈ ಸಂದರ್ಭದಲ್ಲಿ ವಿನಾಯಕ ಹೆಗಡೆ, ಮಂಜುನಾಥ ಇಟಗಿ, ಮಹಾಂತೇಶ ರೇವಡಿ, ಅರುಣ ಶೆಟ್ಟಿ, ಸುಜೀತ ನಾಯ್ಕ, ಪುಷ್ಪಾ ನಾಯ್ಕ, ಎಸ್.ವಿ. ವಸ್ತ್ರದ, ರಪೀಖ್ ಶೇಖ್, ಎನ್.ವಿ. ರಾತೋಡ, ಎಂ.ಬಿ. ಆಗೇರ, ತಿಮ್ಮಣ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.