ಮೈಸೂರು : ಮಂಡ್ಯ ರಮೇಶ್ ಅವರ ನಟನ ರಂಗಶಾಲೆಯು ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ದಿನಾಂಕ 31 ಆಗಸ್ಟ್ 2025ರಂದು ಮಧ್ಯಾಹ್ನ 3-00 ಹಾಗೂ ಸಂಜೆ 6-30 ಗಂಟೆಗೆ ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಪ್ರಸ್ತುತ ಪಡಿಸುವ ಎ.ಆರ್. ಗರ್ನಿ ಅವರ ‘ಲವ್ ಲೆಟರ್ಸ್’ ನಿನ್ನ ಪ್ರೀತಿಯ ನಾನು! ನಾಟಕವು ಪ್ರದರ್ಶನಗೊಳ್ಳಲಿದೆ.
ನಾಟಕದ ವಿನ್ಯಾಸ ಜಿ. ಜಯಂತ್ ಮತ್ತು ನಿಶಾಂತ್ ಗುರುಮೂರ್ತಿ ಅವರದ್ದು. ನಾಟಕದ ರೂಪಾಂತರ ಮತ್ತು ನಿರ್ದೇಶನ ವೆಂಕಟೇಶ್ ಪ್ರಸಾದ್ ಅವರದ್ದು. ಪ್ರಧಾನ ಭೂಮಿಕೆಯಲ್ಲಿ ರಂಗಭೂಮಿ, ಸಿನಿಮಾ ಕಲಾವಿದ ಕಿಶೋರ್ ಕುಮಾರ್ ಹಾಗೂ ನಿರೂಪಕಿ, ನಟಿ ಸಿರಿ ರವಿಕುಮಾರ್ ಅಭಿನಯಿಸಲಿದ್ದಾರೆ. ರಂಗಾಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ. 72595 37777, 94804 68327 ಮತ್ತು 98455 95505 ಸಂಪರ್ಕಿಸಿರಿ.