ತೀರ್ಥಹಳ್ಳಿ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತೀರ್ಥಹಳ್ಳಿ ಲೀಜನ್ ಇವರು ಆಯೋಜಿಸಿದ ‘ಭಾವಗೀತೆಗಳ ಕಲಿಕಾ ಶಿಬಿರ ಮತ್ತು ಸಂಗೀತ ಸಂಜೆ’ ಕಾರ್ಯಕ್ರಮವು ಎಲೆ ಮನೆ, ಹಾಲಿಡೇ ರಿಟ್ರೀಟ್, ಮ್ರಗವಧೆ ಇಲ್ಲಿ ಕನ್ನಡನಾಡಿನ ಹೆಸರಾಂತ ಗಾಯಕರು, ಸಂಗೀತ ನಿರ್ದೇಶಕರಾದ ಉಪಾಸನಾ ಮೋಹನ್ ಇವರ ಮಾರ್ಗದರ್ಶನದಲ್ಲಿ ದಿನಾಂಕ 24 ನವೆಂಬರ್ 2024ರಂದು ನೆರವೇರಿತು.
ಸುಮಾರು 25 ಶಿಬಿರಾರ್ಥಿಗಳು ಚನ್ನಗಿರಿ, ಭದ್ರಾವತಿ, ಶಿವಮೊಗ್ಗ, ಕೊಪ್ಪ ಮತ್ತು ತೀರ್ಥಹಳ್ಳಿ ತಾಲೂಕುಗಳಿಂದ ಭಾವಗೀತೆಗಳ ಕಲಿಕಾ ಶಿಬಿರದಲ್ಲಿ ಭಾಗವಹಿಸಿದರು. ಶ್ರೀ ಮಲ್ಲಿಕಾರ್ಜುನ ದೇವಾಲಯ ಮ್ರಗವಧೆ ಇದರ ಅಧ್ಯಕ್ಷರು ಶ್ರೀ ಉದಯಶಂಕರ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸೀನಿಯರ್ ಹೆಚ್.ಎನ್. ಸೂರ್ಯನಾರಾಯಣ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಉಪಾಸನಾ ಮೋಹನ್ ಇವರು ಕೆಲವು ಪ್ರಸಿದ್ಧ ಭಾವಗೀತೆಗಳನ್ನು ಮಕ್ಕಳಿಗೆ ಶ್ರುತಿ ಬದ್ದವಾಗಿ ಹಾಡುವ ವಿಧಾನವನ್ನು ತಿಳಿಸಿದರು.
ಸಂಜೆ ನಡೆದ ಮುಕ್ತಾಯ ಸಮಾರಂಭದಲ್ಲಿ ಶ್ರೀ ಉಪಾಸನಾ ಮೋಹನ್ ಇವರನ್ನು ಸನ್ಮಾನಿಸಲಾಯಿತು. ಉಪಾಸನಾ ಮೋಹನ್ ಇವರ ಜೊತೆ ಶ್ರೀ ರಾಘವೇಂದ್ರ ಕಿರಣಕೆರೆ, ಕುಮಾರಿ ನಿಧಿ, ಕುಮಾರಿ ಐಸಿರಿ ಇವರ ಸಂಗೀತ ಸಂಯೋಜನೆಯಲ್ಲಿ ಶ್ರೀ ರಾಘವೇಂದ್ರ ರಂಗದೋಳ್ ತಬಲ ಹಾಗೂ ಶ್ರೀನಿಧಿ ಕೀಬೋರ್ಡ್ ಸಹಕಾರದಲ್ಲಿ ಸಂಗೀತ ಸಂಜೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸೀನಿಯರ್ ಟಿ.ಎನ್. ಜಗದೀಶ್ ಪೂರ್ವಾಧ್ಯಕ್ಷರು, ಸೀನಿಯರ್ ಬಿಸಿಲುಮನೆ ಮಂಜುನಾಥ್ ಕಾರ್ಯದರ್ಶಿ, ಸೀನಿಯರ್ ಶಿವಶಂಕರ್, ಸೀನಿಯರ್ ಕೆ.ಪಿ.ಎಸ್. ಸ್ವಾಮಿ, ತೀರ್ಥಹಳ್ಳಿಯ ರಾಷ್ಟ್ರೀಯ ಕೋ-ಆರ್ಡಿನೇಟರ್ ಎಸ್.ಸಿ.ಐ. ಎಲ್ಲಾ ಸದಸ್ಯರು ಮತ್ತು ಕುಟುಂಬದವರು ಪಾಲ್ಗೊಂಡರು. ಶ್ರೀ ಅಮಿತ್ ನಾರಾಯಣ್ ಕಾರ್ಯಕ್ರಮದ ವ್ಯವಸ್ಥೆ ಎಲೆ ಮನೆ ಹಾಲಿಡೇ ರಿಟ್ರೀಟ್ ನಲ್ಲಿ ನಿರ್ವಹಿಸಿದರು.