ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕೊಡಮಾಡುವ ‘ಮಾತೋಶ್ರೀ ಶಂಕರಮ್ಮ ಪ. ಬಳಿಗಾರ್’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 22 ಜೂನ್ 2025ರ ಭಾನುವಾರ ಬೆಳಿಗ್ಗೆ ಘಂಟೆ 10.30ಕ್ಕೆ ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ. ಎಚ್. ಎಲ್. ಪುಷ್ಟ ಆಶಯ ನುಡಿಗಳನ್ನಾಡಲಿದ್ದಾರೆ. ಸಮಾರಂಭದಲ್ಲಿ ಡಾ. ಶಿವಗಂಗಾ ರುಮ್ಮ ಇವರಿಗೆ ಗದ್ಯ ವಿಭಾಗದಲ್ಲಿ, ಡಾ. ಕವಿತಾ ರೈ ಇವರಿಗೆ ಕಾವ್ಯ ವಿಭಾಗದಲ್ಲಿ, ನಂದಿನಿ ಜಯರಾಮ್ ಇವರಿಗೆ ಸಕೀರ್ಣ ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಶ್ರೀಮತಿ ಗಂಗಮ್ಮ (ಅರುಂಧತಿ) ಬಳಿಗಾರ್ ಉಪಸ್ಥಿತರಿರುವರು.


