ಚಿತ್ರದುರ್ಗ : ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಮಧ್ಯ ಕರ್ನಾಟಕ-ಕಾವ್ಯ ಸಂಭ್ರಮ ಕಾರ್ಯಕ್ರಮವು ದಿನಾಂಕ 27 ಜುಲೈ 2025ರಂದು ಚಿತ್ರದುರ್ಗದ ಪಿಳ್ಳೇಕಾರನ ಹಳ್ಳಿಯ ಬಾಪೂಜಿ ಸಮೂಹ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ.
ರಾಜ್ಯ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಉಪಾಧ್ಯಕ್ಷರಾದ ಡಾ. ಎಂ. ಕೆ. ವೀರೇಶ ಚಿತ್ರದುರ್ಗ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಚಿತ್ರದುರ್ಗದ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಬಿ. ಟಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಎಲ್ಲ ತಾಲೂಕುಗಳಿಂದ ತಲಾ ಒಬ್ಬರು ಕವಿ ಮತ್ತು ಕವಯತ್ರಿಯರು ಭಾಗವಹಿಸಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ “ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲ ತಾಲೂಕು ಘಟಕಗಳ ಅಧ್ಯಕ್ಷರೊಂದಿಗೆ ಚರ್ಚಿಸಿ ಪ್ರತೀ ತಾಲೂಕಿನಿಂದ ತಲಾ ಒಬ್ಬರು ಕವಿ, ಒಬ್ಬರು ಕವಯಿತ್ರಿ ಸೇರಿದಂತೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ದಾವಣಗೆರೆ ತಾಲೂಕಿನಿಂದ ಸನಾವುಲ್ಲಾ ನವಿಲೇಹಾಳ್ ಮತ್ತು ಸೌಮ್ಯಾ ದಯಾನಂದ್, ಹರಿಹರ ತಾಲೂಕಿನಿಂದ ಕುಂದೂರು ಮಂಜಪ್ಪ ಮತ್ತು ರಾಧಾ ಹನುಮಂತಪ್ಪ, ಟಿ. ಚನ್ನಗಿರಿ ತಾಲೂಕಿನಿಂದ ಶರತ್ ಹೆಚ್.ಎಸ್. ಸಂತೆಬೆನ್ನೂರು ಮತ್ತು ಕನಕ ಯು. ಆರ್. ಹಿರೇಕೊಗಲೂರು, ಹೊನ್ನಾಳಿ ತಾಲೂಕಿನಿಂದ ಕಡದಕಟ್ಟೆ ತಿಮ್ಮಪ್ಪ ಮತ್ತು ಕವಿತಾ ನಾಯಕ್, ಜಗಳೂರು ತಾಲೂಕಿನಿಂದ ಎಸ್. ವಿ. ಶಾಂತಕುಮಾರ್ ಮತ್ತು ಕೆ. ಸುಜಾತಮ್ಮ ರಾಜು, ನ್ಯಾಮತಿ ತಾಲೂಕಿನಿಂದ ಜಿನಿಜಲಿಂಗಪ್ಪ ಮತ್ತು ಬಿ. ಜಿ. ಚೈತ್ರ ತಿಪ್ಪೇಸ್ವಾಮಿ ಇವರುಗಳು ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.

