ಬೆಂಗಳೂರು : ಸಂಪತ್ ಮರಾಠೆ ಮತ್ತು ಮಮತಾ ಮರಾಠೆ ಅವರ ಪುತ್ರಿ ಮಾಹಿ ಮರಾಠೆ ಅವರ ಭರತನಾಟ್ಯ ರಂಗ ಪ್ರವೇಶ ಬೆಂಗಳೂರಿನ ಜಯನಗರದ ವಿವೇಕ ಆಡಿಟೋರಿಯಂನಲ್ಲಿ ದಿನಾಂಕ 06-01-2024ರಂದು ನಡೆಯಿತು.
ಸಾಂಪ್ರದಾಯಿಕ ಪುಷ್ಪಾಂಜಲಿಯೊಂದಿಗೆ ನೃತ್ಯ ಆರಂಭವಾಯಿತು. ನಂತರ ರುದ್ರ ಶ್ಲೋಕ ಪ್ರಸ್ತುತಪಡಿಸಲಾಯಿತು. ಶಿವನ ಗುಣ ಮತ್ತು ಶಕ್ತಿಯನ್ನು ಕಲಾವಿದೆ ಪರಿಪೂರ್ಣವಾಗಿ ಅಭಿವ್ಯಕ್ತಪಡಿಸಿದರು. ಪುರಂದರದಾಸರ ಕೃತಿ ಜಗದೋದ್ಧಾರನ ಆಡಿಸಿದಳೆಶೋದೆ ಮೂಲಕ ವಿಸ್ಮಯ, ಭಕ್ತಿ ಮುಂತಾದ ಹಲವು ಭಾವಗಳನ್ನು ನಿರ್ವಹಿಸಿ ಪ್ರೇಕ್ಷಕರನ್ನು ಮೂಕವಿಸ್ಮಿತಗೊಳಿಸಿದರು. ವಿಠಲನನ್ನು ಸ್ತುತಿಸುವ ಬೃಂದಾವನಿ ವೇಣು ಅಭಂಗ್ ಪ್ರಸ್ತುತ ಪಡಿಸಿದ್ದು ವಿಶೇಷವಾಗಿತ್ತು. ಭರತನಾಟ್ಯದ ಕೊನೆಯ ಭಾಗ ತಿಲ್ಲಾನ ಮತ್ತು ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಉದಯ ಕುಮಾರ್ (ನಟುವಾಂಗ), ವಿದ್ವಾನ್ ಶ್ರೀವತ್ಸ (ಹಾಡುಗಾರಿಕೆ), ವಿದ್ವಾನ್ ಗುರುಮೂರ್ತಿ (ಮೃದಂಗ), ವಿದ್ವಾನ್ ಶಂಕರ್ ರಾಮನ್ (ವೀಣೆ), ವಿದ್ವಾನ್ ಭಾರ್ಗವ ಹಾಲಂಬಿ (ರಿದಮ್ ಪ್ಯಾಡ್), ವಿದ್ವಾನ್ ಕಾರ್ತಿಕ್ (ಕೊಳಲು) ಉತ್ತಮ ಸಹಕಾರ ನೀಡಿದರು.