ಬೆಂಗಳೂರು : ಬೆಂಗಳೂರಿನ ಸ್ವರ್ಣ ಭಾರತಿ ಫೌಂಡೇಶನ್ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಕೊಡಮಾಡುವ ‘ಮಹಿಳಾ ರತ್ನ 2025’ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 23 ಮಾರ್ಚ್ 2025ರಂದು ಬೆಂಗಳೂರಿನ ಈಸ್ಟ್‌ಕಲ್ಬರಲ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದಲ್ಲಿ ಕೊಡಗು ಜಿಲ್ಲೆ ಸೋಮವಾರಪೇಟೆಯ ಬರಹಗಾರ್ತಿ ಗೀತಾಂಜಲಿ ಇವರ ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ‘ಮಹಿಳಾ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭ ಬೆಂಗಳೂರು ಸಹಾಯಕ ಪೊಲೀಸ್ ಕಮಿಷನರ್ ರಂಗಪ್ಪ, ಪತ್ರಕರ್ತೆ ಸುಕನ್ಯಾ, ಸ್ವರ್ಣ ಭಾರತ್ ಪೌಂಡೇಶನ್ ಇದರ ಅಧ್ಯಕ್ಷೆ ಡಾ. ರಜನಿ ಸಂತೋಷ್ ಸೇರಿ ದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Next Article ಕಾವ್ಯ ರೂಪಕ ವಿಮರ್ಶೆ | ‘ಕಲ್ಲರಳಿ ಹೆಣ್ಣಾಗಿ’