Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಉದ್ಯಾವರದಲ್ಲಿ ಯು.ಎಫ್.ಸಿ. ಮಕ್ಕಳ ಹಬ್ಬ – 2023 | ನವೆಂಬರ್ 25
    Competition

    ಉದ್ಯಾವರದಲ್ಲಿ ಯು.ಎಫ್.ಸಿ. ಮಕ್ಕಳ ಹಬ್ಬ – 2023 | ನವೆಂಬರ್ 25

    November 22, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಸ್ಪರ್ಧೆ ‘ಯು.ಎಫ್.ಸಿ. ಮಕ್ಕಳ ಹಬ್ಬ- 2023’ವು ದಿನಾಂಕ 25-1-2023ರ ಶನಿವಾರ ಬೆಳಿಗ್ಗೆ ಗಂಟೆ 9.30ರಿಂದ ಉದ್ಯಾವರ ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ ಜರಗಲಿದೆ.

    ಬೆಳಗ್ಗೆ ಗಂಟೆ 9.30ಕ್ಕೆ ಜರಗುವ ಉದ್ಘಾಟನಾ ಸಮಾರಂಭದಲ್ಲಿ ಮಕ್ಕಳ ಹಬ್ಬದ ಉದ್ಘಾಟನೆಯನ್ನು ಝೀ ಟಿವಿ ಸರಿಗಮಪ ಲಿಟಲ್ ಚಾಂಪಿಯನ್ ಶಿಪ್ ಸೀಸನ್ – 19ರ ದ್ವಿತೀಯ ಪ್ರಶಸ್ತಿ ವಿಜೇತೆ ಕು. ಶಿವಾನಿ ನವೀನ್ ನೆರವೇರಿಸಲಿರುವರು. ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ ಇವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಉದಯ ಶೆಟ್ಟಿ ಮುನಿಯಾಲು ಮತ್ತು ಉಡುಪಿ ಜಿಲ್ಲಾ ಅನಿವಾಸಿ ಭಾರತೀಯರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಉಡುಪಿ ಶೇಖ್ ವಾಹಿದ್ ಭಾಗವಹಿಸಲಿದ್ದಾರೆ.

    ಸಂಜೆ ಗಂಟೆ 4.00ಕ್ಕೆ ಜರಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಜಯರಾಜ್ ಅಮೀನ್ ವಹಿಸಲಿದ್ದು, ಮಂಗಳೂರಿನ ನಾದನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಎಂಡ್ ಕಲ್ಚರಲ್ ಟ್ರಸ್ಟಿನ ನಿರ್ದೇಶಕಿಯಾದ ವಿದುಷಿ ಭ್ರಮರಿ ಶಿವಪ್ರಕಾಶ್ ಸಮಾರೋಪ ಭಾಷಣ ಮಾಡಲಿರುವರು. ಮುಖ್ಯ ಅತಿಥಿಗಳಾಗಿ‌ ಉಡುಪಿ ಕಾಂಚನ್ ಹುಂಡೈ ಮೋಟರ್ಸ್ ಇದರ ನಿರ್ದೇಶಕರಾದ ಶ್ರೀ ಪ್ರಸಾದ್ ರಾಜ್ ಕಾಂಚನ್ ಮತ್ತು ಉದ್ಯಾವರ ಹಲೀಮಾ ಸಾಬ್ಜು ಅಡಿಟೋರಿಯಂ ಟ್ರಸ್ಟಿನ ಆಡಳಿತ ವಿಶ್ವಸ್ಥರಾದ ಶ್ರೀ ಅಬ್ದುಲ್ ಜಲೀಲ್ ಸಾಹೇಬ್ ಭಾಗವಹಿಸಲಿದ್ದಾರೆ. ಸಂಸ್ಥೆಯ ಗೌರವಾಧ್ಯಕ್ಷರಾದ ಉದ್ಯಾವರ ಶ್ರೀ ನಾಗೇಶ್ ಕುಮಾರ್, ಅಧ್ಯಕ್ಷರಾದ ಶ್ರೀ ತಿಲಕ್ ರಾಜ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿಯಾದ ಅಬಿದ್ ಆಲಿ, ಕೋಶಾಧಿಕಾರಿಯಾದ ಪ್ರೇಮ್ ಮಿನೇಜಸ್ ಮತ್ತು ಸರ್ವ ಸದಸ್ಯರು ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleತೆಕ್ಕಟ್ಟೆ ಹಯಗ್ರೀವದಲ್ಲಿ ‘ಅರ್ಥಾಂಕುರ-5’
    Next Article ಪುತ್ತೂರು ತಾಲೂಕು ಕ.ಸಾ.ಪ. ದತ್ತಿ ನಿಧಿ-2015 ಉಪನ್ಯಾಸ ಕಾರ್ಯಕ್ರಮ | ನವೆಂಬರ್ 24
    roovari

    Add Comment Cancel Reply


    Related Posts

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ನೃತ್ಯ ವಿಮರ್ಶೆ | ನಯನ ಮನೋಹರ ನೃತ್ತಾಭಿನಯ ಸಂವೃತಳ ರಮ್ಯ ನರ್ತನ

    May 22, 2025

    ಮಂಗಳೂರು ಉರ್ವಸ್ಟೋರಿನಲ್ಲಿ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕ ಉದ್ಘಾಟನೆ | ಮೇ 25

    May 20, 2025

    ಕಟಪಾಡಿ ವೇಣುಗಿರಿಯಲ್ಲಿ ‘ಭಜನಾ ವೈಭವ 2025’ ಸಾಂಪ್ರದಾಯಿಕ ಭಜನಾ ಸ್ಪರ್ಧೆ | ಜೂನ್ 22

    May 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.