24 ಫೆಬ್ರವರಿ 2023, ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಸಮಾಜ ಸೇವಾ ಸಂಘ ಪುತ್ತೂರು ಇದರ ಶತಮಾನೋತ್ಸವ ಸಂಭ್ರಮದ ಸ್ಥಾಪನಾ ದಿನದ ಪ್ರಯುಕ್ತ ಶ್ರೀ ಸಚ್ಚಿದಾನಂದ ಸೇವಾ ಸದನ, ದರ್ಬೆ ಇಲ್ಲಿ ದಿನಾಂಕ 23 ಫೆಬ್ರವರಿ 2023ರಂದು ನಡೆದ ಕಾರ್ಯಕ್ರಮದಲ್ಲಿ ಹಿರಿಯರು,ಮಾಜಿ ವಿಧಾನಪರಿಷತ್ ಸದಸ್ಯರು ಆದ ಶ್ರೀ ಅಣ್ಣಾ ವಿನಯಚಂದ್ರ ರವರು ಗಣೇಶ್ ನಾಯಕ್ ಪುತ್ತೂರು ಇವರು ಬರೆದ “ಮನವು ಮಾತಾಡಿತು” ಪುಸ್ತಕ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು ಇದರ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ,ಉದ್ಯಮಿ ಕರೋಡಿ ಗೋಪಾಲಕೃಷ್ಣ ಬೋರ್ಕರ್, ಪ್ರಗತಿಪರ ಕೃಷಿಕ ಕುಳ್ಳಾಜೆ ಈಶ್ವರ ನಾಯಕ್, ಉದ್ಯಮಿ ಶಿವಶಂಕರ ನಾಯಕ್ ರೈತ ಬಂಧು ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ ,ಸಾರಸ್ವತ ಸಮೂಹ ಸಂಸ್ಥೆಗಳ ಕೇಂದ್ರೀಯ ಸಮಿತಿ ಅಧ್ಯಕ್ಷ ಉಮೇಶ್ ಪ್ರಭು ಬೆಳ್ತಂಗಡಿ, ಪುರುಷೋತ್ತಮ ಪ್ರಭು ಮುಂಡಕೊಚ್ಚಿ ,ನಿವೃತ್ತ ವೃತ್ತ ನಿರೀಕ್ಷಕ ಮುಕುಂದ ನಾಯಕ್ ,ಶ್ರೀಮತಿ ವಿನತಾದೇವಿ ಸುಳ್ಯ ,ಬದನಾಜೆ ಸ.ಪ್ರೌ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಮುನಾ ಕೆ.ಎಸ್ ,ಪ್ರಗತಿಪರ ಕೃಷಿಕ ರಾಮಚಂದ್ರ ಬೋರ್ಕರ್ ,ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಉದಯ ಶಂಕರ ಕುಕ್ಕಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು .ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ದ ಅಧ್ಯಕ್ಷ ಬಾಲಕೃಷ್ಣ ನಾಯಕ್ ಆಜೇರು ಅಧ್ಯಕ್ಷತೆ ವಹಿಸಿದ್ದರು .ಸಂಘದ ಕಾರ್ಯದರ್ಶಿ ಮೂಲಚಂದ್ರ ಕಾಂಚನ ಕಾರ್ಯಕ್ರಮ ನಿರೂಪಿಸಿದರು . ಪುಸ್ತಕಕ್ಕೆ ಚುಟುಕು ಸಾಹಿತಿ ಜಿ.ಕೆ ನಾಯಕ್ ಮುನ್ನುಡಿ ಬರೆದಿದ್ದು, ಗೆಳೆಯನ ಅಂತರಾಳದಲ್ಲಿ ವಿವೇಕಾನಂದ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಪ್ರಮೋದ್ ಕುಮಾರ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಮನವು ಮಾತಾಡಿತು : ಇದೊಂದು ದಿನ ನಿತ್ಯ ಕಾಣುವ ಒಂದಷ್ಟು ಘಟನೆಗಳಿಗೆ ಅಕ್ಷರ ರೂಪ ನೀಡಲಾದ ಸಣ್ಣ ಪ್ರಯತ್ನ. ಕೇವಲ ಕೆಲವೇ ನಿಮಿಷದಲ್ಲಿ ಓದಿ ಮುಗಿಸಬಹುದಾದ ಸುಮಾರು 35ಕ್ಕೂ ಅಧಿಕ ಕತೆಗಳು ಇಲ್ಲಿವೆ .ವಾಸ್ತವಿಕತೆಯ ಪ್ರಸ್ತಾಪದ ಜೊತೆಗೆ ಒಂದಷ್ಟು ಯುವಜನತೆಗೆ ಪುಸ್ತಕ ಪ್ರೀತಿ ಬೆಳೆಸುವ ಉದ್ದೇಶದಿಂದ ನನ್ನ ಪ್ರಥಮ ಪ್ರಯತ್ನ ನಡೆದಿದೆ .
“ಇದೊಂದು ಕಲಿಕೆಯ ಹಾದಿಯ ಮಗುವಿನ ಸಣ್ಣ ಪ್ರಯತ್ನವಷ್ಟೇ ..ಇಲ್ಲಿ ಹಲವು ತಪ್ಪುಗಳಿರಬಹುದು ..ಎಷ್ಟಾದರೂ ಕಲಿಯುವಾಗ ಎಡವುದು ಸಹಜವಲ್ಲವೇ ?ಇವೆಲ್ಲವನ್ನು ತಮ್ಮ ಮನದ ಜೋಳಿಗೆಯ ಮೂಲೆಯಲ್ಲಿರಿಸಿ ನನ್ನನ್ನು ‘ನಿಮ್ಮಮನೆಯಅಕ್ಷರ ದೀಪವೇಂದೇ ಭಾವಿಸಿ ‘ ನನ್ನ ಮುಂದಿನ ಬರವಣೆಗೆ ಪ್ರೇರಣೆ ನೀಡುವಿರಿ ಎಂಬ ನಂಬಿಕೆಯೊಂದಿಗೆ ಈ ‘ಮನವು ಮಾತಾಡಿದ ‘ವಿಚಾರಗಳನ್ನು ಪುಸ್ತಕ ರೂಪದಲ್ಲಿ ನಿಮ್ಮ ಕೈಗಿತ್ತಿದ್ದೇನೆ ..ಇಲ್ಲಿ ಅಮ್ಮಾ ಕತೆಯಾಗಿದ್ದಾರೆ ..ಹಿರಿಯ ಜೀವವೊಂದು ಮಾತಾಡಿದೆ ..ತಂಗಿ ಪ್ರೇರಣೆಯಾಗಿದ್ದಾಳೆ ..ಕಾಗದದ ದೋಣಿ ತೇಲಿದೆ ..ಮಾಯೆಯೊಂದು ಸುತ್ತು ಹಾಕಿದೆ ..ಚಿತ್ರಮಂದಿರದ ಎದುರಿನ ಪೋಸ್ಟರ್ ರಾರಾಜಿಸಿದೆ..ಮಗುವಿನ ನಗು ಅರಳಿದೆ…ಗಣಪನ ಗುಡಿಯಲ್ಲಿ ಬೆಳಕು ಕಂಡಿದೆ ..ಎಂಟನೆಯ ಮಹಡಿ ಹತ್ತಿ ಮಾತು ಆರಂಭವಾಗಿದೆ ..ಸೇತುವೆಯ ನಿರ್ಮಾಣ ವಾಗಿದೆ ..ಧಣಿಗಳ ಮನೆ ಯ ದರ್ಶನವಾಗಿದೆ..ದೀಪದ ಬೆಳಕು ಪ್ರಕಾಶ ಬೀರಿದೆ ..ಜೊತೆಗಾತಿ ಕೈ ಹಿಡಿದು ಹಜ್ಜೆ ಹಾಕಿದ್ದಾಳೆ ..ಒಡೆಯ ಕರುಣೆ ತೋರಿದ್ದಾನೆ..ಕನಸು ನನಸಾಗಿದೆ ..ತೊಟ್ಟಿ ತುಂಬಿ ತುಳುಕಿದೆ ..ಮೊಸರು ಕುಡಿಕೆಯ ಕುಡಿಕೆ ಒಡೆದಾಗಿದೆ ..ಹುಡುಗ ಬೀದಿಯುದ್ದಕ್ಕೂ ಅಳೆದಿದ್ದಾನೆ ..ದಾಖಲೆ ದಾಖಲಾಗಿದೆ ..ಬಾಗಿಲು ತೆರೆದಾಗ ಸೈನಿಕನ ಮಾತು ಕೇಳಿದೆ …ಒಡಲ ಬೇನೆ ಕೇಳಿದೆ ..ಇವಲ್ಲವನ್ನು ಕಂಡು ಕೇಳಿ ಮನವು ನಿಮ್ಮೊಂದಿಗೆ ಹೀಗೆ ಮಾತನಾಡಿದೆ …ಈ “ಮನವು ಮಾತಾಡಿತು ” ಪುಸ್ತಕ ದಿಂದ ಸಂಗ್ರಹವಾಗುವ ಮೊತ್ತದ ಒಂದಷ್ಟು ಮೊತ್ತವನ್ನು ತೀರಾ ಸಂಕಷ್ಟದಲ್ಲಿ ಓದು ಮುಂದುವರಿಸಲು ಅಸಾಧ್ಯ ವಾದ ಮನೆಯ ‘ಅಕ್ಷರ ದೀಪ”ವನ್ನು ಬೆಳಗಿಸಲು ವಿನಿಯೋಗಿಸ ಬೇಕೆಂದು ತೀರ್ಮಾನಿಸಿದ್ದೇನೆ ..ನನ್ನ ಈ ಪ್ರಥಮ ಪ್ರಯತ್ನ ದ “ಬರಹದ ಗುಚ್ಛ ವನ್ನು ಪ್ರೀತಿಯಿಂದ ಕತ್ತಲು ಕವಿದಿರುವ ಮನೆಯ ಅಕ್ಷರ ದೀಪ ಬೆಳಗಲು ನೀವೂ ನನ್ನೊಂದಿಗೆ ಕೈಜೋಡಿಸುವಿರಿ ಎಂಬ ಆಶಯದೊಂದಿಗೆ ಮಾತಿಗೆ ವಿರಾಮ ನೀಡುತ್ತೇನೆ” ಎಂಬುದು ಲೇಖಕ ಗಣೇಶ್ ನಾಯಕ್ ಪುತ್ತೂರು ಇವರ ಮನದ ಮಾತು.
1 Comment
Congratulations & All the best Gansh Nayak. God bless you.