ಬಂಟ್ವಾಳ : ಬಿ.ವಿ. ಕಾರಂತ ರಂಗಭೂಮಿಕಾ ಟ್ರಸ್ಟ್ (ರಿ.) ಮಂಚಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಬಿ.ವಿ. ಕಾರಂತ ನೆನಪಿನ ‘ಮಂಚಿ ನಾಟಕೋತ್ಸವ’ ರಂಗ ಭೂಮಿಕಾ -2023 ದಿನಾಂಕ 20-05-2023ರಿಂದ 22-05-2023ರವರೆಗೆ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ, ಕುಕ್ಕಾಜೆ ಇಲ್ಲಿ ನಡೆಯಲಿದೆ.
20-05-2023 ಶನಿವಾರ
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಬ್ಯಾಂಕ್ ನ ನಿವೃತ್ತ ಎ.ಜಿ.ಎಂ. ಶ್ರೀ ಶ್ರೀನಿವಾಸ ದೇಶಪಾಂಡೆ ಮಾಡಲಿದ್ದು, ಅರೆಹೊಳೆ ಪ್ರತಿಷ್ಠಾನದ ರಂಗ ಸಂಘಟಕರಾದ ಶ್ರೀ ಅರೆಹೊಳೆ ಸದಾಶಿವ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಶ್ರೀ ರಾಜೇಶ್ ಮತ್ತು ಲಯನ್ಸ್ ಜಿಲ್ಲಾ ಸಂಯೋಜಕರು ಲ| ಶ್ರೀ ಮನೋರಂಜನ್ ಕರೈರವರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ‘ಕಲಾಭಿ ಥಿಯೇಟರ್’ ಮಂಗಳೂರು ಪ್ರಸ್ತುತಪಡಿಸುವ ‘ಮೋಗ್ಲಿ’ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. ರುಡ್ಯಾರ್ಡ್ ಕಿಪ್ಲಿಂಗ್ ಮೂಲ ಕೃತಿ ಆಧಾರಿತ ಈ ನಾಟಕದ ರಂಗರೂಪ ಮತ್ತು ನಿರ್ದೇಶನ ಭುವನ ಮಣಿಪಾಲ ಅವರದ್ದು.
21-05-2023 ಆದಿತ್ಯವಾರ
ಆಸ್ತಿತ್ವ (ರಿ.) ಮಂಗಳೂರು ಪ್ರಸ್ತುತಪಡಿಸುವ ಕೊಂಕಣಿ ನಾಟಕ ‘ಜುಗಾರಿ’. ಎಂ.ಪಿ. ರಾಜೇಶ್ ರಚಿಸಿದ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಅರುಣ್ ಲಾಲ್ ಮಾಡಿದ್ದು, ನಿರ್ವಹಣೆ ಕ್ರಿಸ್ಟಿ ನೀನಾಸಂ ಅವರದ್ದು.
22-05-2023 ಸೋಮವಾರ
‘ಮಂಚಿ ನಾಟಕೋತ್ಸವ’ದ ಸಮಾರೋಪ ಸಮಾರಂಭ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಕಟೀಲು ಯಕ್ಷಗಾನ ಬಯಲಾಟ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಪತ್ತುಮುಡಿ ವೆಂಕಟೇಶ ಪ್ರತಾಪ್ ರವರು ವಹಿಸಲಿರುವರು. ಅತಿಥಿಗಳಾಗಿ ಲ| ಶ್ರೀ ಜೆಪ್ರಿ ಲೂವಿಸ್ ಕುಕ್ಕಾಜೆ ಹಾಗೂ ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಮಂಚಿ ಇದರ ಅಧ್ಯಕ್ಷರಾದ ಶ್ರೀ ಉಮ್ಮರ್ ಬಿ.ಯವರು ಭಾಗವಹಿಸಲಿದ್ದಾರೆ. ಮೂಲ ಬಿ.ಆರ್. ವೆಂಕಟರಮಣ ಐತಾಳ್ ರವರ ‘ಮಕ್ಕಳ ರಾಮಾಯಣ’ ಕುಂದಾಪ್ರ ಕನ್ನಡ ನಾಟಕವು ಸುರಭಿ (ರಿ.) ಬೈಂದೂರು ಇವರಿಂದ ಪ್ರಸ್ತುತಗೊಳ್ಳಲಿದೆ. ಈ ನಾಟಕವನ್ನು ಗಣೇಶ್ ಮಂದಾರ್ತಿಯವರು ಕುಂದಾಪ್ರ ಕನ್ನಡಕ್ಕೆ ಅನುವಾದಿಸಿ, ವಿನ್ಯಾಸ ಹಾಗೂ ನಿರ್ದೇಶಿಸಿದ್ದಾರೆ.