ಬ್ರಹ್ಮಾವರ : ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಬೈಕಾಡಿ, ಬ್ರಹ್ಮಾವರ ಉಡುಪಿ ಇದರ ವತಿಯಿಂದ ‘ಮಂದಾರ ರಂಗೋತ್ಸವ 2025’ ಸಮಾರಂಭವನ್ನು ದಿನಾಂಕ 04 ಏಪ್ರಿಲ್ 2025ರಿಂದ 06 ಏಪ್ರಿಲ್ 2025ರವರೆಗೆ ಪ್ರತಿದಿನ ಸಂಜೆ 7-00 ಗಂಟೆಗೆ ಬ್ರಹ್ಮಾವರದ ಹೋಲಿ ಫ್ಯಾಮಿಲಿ ಚರ್ಚ್ ಆವರಣದಲ್ಲಿರುವ ನಿರ್ಮಲ ಆಂಗ್ಲ ಮಾಧ್ಯಮ ಶಾಲಾ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 04 ಏಪ್ರಿಲ್ 2025ರಂದು ಅರುಣ್ ಲಾಲ್ ಕೇರಳ ಇವನ ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಂಗಳೂರಿನ ಅಸ್ತಿತ್ವ (ರಿ.) ತಂಡದವರಿಂದ ‘ಮತ್ತಾಯ’, ದಿನಾಂಕ 05 ಏಪ್ರಿಲ್ 2025ರಂದು ರಂಜಿತ್ ಶೆಟ್ಟಿ ಕುಕ್ಕುಡೆ ಇವರ ನಿರ್ದೇಶನದಲ್ಲಿ ತೆಕ್ಕಟ್ಟೆಯ ಧಮನಿ ಟ್ರಸ್ಟ್ (ರಿ.) ತಂಡದವರಿಂದ ‘ಸೂರ್ಯ ಬಂದ’ ಮತ್ತು ದಿನಾಂಕ 06 ಏಪ್ರಿಲ್ 2025ರಂದು ರೋಹಿತ್ ಎಸ್. ಬೈಕಾಡಿ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಬೈಕಾಡಿಯ ಮಂದಾರ (ರಿ.) ತಂಡದವರಿಂದ ‘ಬೆತ್ತಲಾಟ’ ನಾಟಕಗಳು ಪ್ರದರ್ಶನಗೊಳ್ಳಲಿದೆ.