Subscribe to Updates

    Get the latest creative news from FooBar about art, design and business.

    What's Hot

    ಮಕ್ಕಳ ಕಲಾ ಲೋಕದ ಅಧ್ಯಕ್ಷರಾಗಿ ರಮೇಶ ಎಂ. ಬಾಯಾರು

    February 23, 2026

    ರಂಗ ವಿಮರ್ಶೆ | ಎಳೆ ಪ್ರತಿಭೆಗಳಿಗೆ ಸಾಕ್ಷಿಯಾದ ರಂಗ ಪ್ರಯೋಗಗಳು

    February 23, 2026

    ಮಂಗಳೂರು ವಿ.ವಿ. ಕಾಲೇಜಿನಲ್ಲಿ ಹಿರಿಯ ಲೇಖಕಿ ರೋಹಿಣಿಗೆ ಅಭಿನಂದನೆ

    February 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕವಿ ವೆಂಕಟೇಶ್ವರ ಗಟ್ಟಿಯವರ ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ
    Literature

    ಕವಿ ವೆಂಕಟೇಶ್ವರ ಗಟ್ಟಿಯವರ ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ

    April 29, 2024Updated:May 2, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email



    ಉಳ್ಳಾಲ : ಖ್ಯಾತ ಕವಿ ವೆಂಕಟೇಶ್ವರ ಗಟ್ಟಿ ಆಯೋಜಿಸಿದ ಮನೆಯಂಗಳದಲ್ಲಿ ಸಾಹಿತ್ಯ ಗೋಷ್ಠಿ ಹಾಗೂ ಕವಿಗೋಷ್ಢಿ ಕಾರ್ಯಕ್ರಮವು ದಿನಾಂಕ 27-04-2024ರಂದು ಮಾಡೂರಿನ ಸತ್ಯನಾರಾಯಣ ನಗರದಲ್ಲಿರುವ ಖ್ಯಾತ ಕವಿ ವೆಂಟೇಶ್ವರ ಗಟ್ಟಿಯವರ ಮನೆಯಂಗಳದಲ್ಲಿ ನಡೆಯಿತು.

    ರೇಖಾ ಸುದೇಶ್ ರಾವ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಜಪ್ಪಿನ ಮೊಗರಿನ ಆದಿಮಾಯೆ ಸನ್ನಿಧಿಯ ಧರ್ಮದರ್ಶಿ ಶ್ರೀ ದಯಾನಂದ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು “ಕವಿರತ್ನ ಕಾಳಿದಾಸ ಇಲ್ಲಿ ನೆಲಸಿದಂತೆ ಭಾಸವಾಗುತ್ತದೆ. ಸಾಹಿತ್ಯ ಸೇವೆಯಿಂದ ಮಾನಸಿಕ‌ಮೌಲ್ಯ ವರ್ಧನೆಯಾಗುತ್ತದೆ.ಅಂತಹ ಭಾಗ್ಯ ಸರ್ವರಿಗೂ ಪ್ರಾಪ್ತವಾಗಲಿ.” ಎಂದು ಹಾರೈಸಿದರು.
    ವೇದಿಕೆಯಲ್ಲಿ ಉಪಸ್ಥಿತರಿದ್ದ ನಾಗರಾಜ ಗಟ್ಡಿ, ಗಣೇಶ ಪ್ರಸಾದ್ ಜೀ ಹಾಗೂ ರೇಮಂಡ್ ಡಿ’ಕೂನ್ಹಾ ತಾಕೊಡೆ ಯವರು ಶುಭಹಾರೈಕೆಯ ನುಡಿಗಳನ್ನಾಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಪಂಗಳ ಈಶ್ವರ ಭಟ್ ಮಾತನಾಡಿ “ವಾಲ್ಮೀಕಿಗೆ ಪ್ರಾಪ್ತವಾದ ಬೀಜ ಮಂತ್ರವೇ ಬೃಹತ್ ರಾಮಾಯಣವನ್ನು ಬರೆಸಿದಂತೆ ತಂಪಾದ ಮಾವಿನ‌ ನೆರಳೂ ಇಂಪಾದ ಕೋಗಿಲೆ ಗಾಯನವೂ ಪ್ರಾಪ್ತವಾಗುವ ಈ ಮನೆಯಂಗಳವು ಇಂದು ಸಾಹಿತ್ಯ ಪೂರ ಹರಿಸುವುದು ಸಂತಸದ ವಿಚಾರ.” ಎಂದರು.
    ಸಭಾಕಾರ್ಯಕ್ರಮದ ಬಳಿಕ ಮಂಗಳೂರಿನ ವೈದ್ಯ ಹಾಗೂ ಬರಹಗಾರರಾದ ಡಾ. ಸುರೇಶ ನೆಗಳಗುಳಿ ಇವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿಯು ನೆರವೇರಿತು.

    ಭಾಗವಹಿಸಿದ ಸರ್ವ ಕವಿಗಳ ಕವನದ ಉದ್ಧರಣೆ ಮಾಡಿ ಮಾತನಾಡಿದ ಡಾ. ಸುರೇಶ ನೆಗಳಗುಳಿ “ಹಲವು ರೀತಿಯ ಹಲವು ಭಾವದ ಸಾಹಿತ್ಯ ಲಹರಿ ಎಲ್ಲರ ಮನೆಯಂಗಳದಲ್ಲೂ ನಡೆಯುವಂತಾಗಲಿ, ವೆಂಕಟೇಶ್ವರ ಗಟ್ಟಿಯವರ ಹಲವು ಮಾಸಗಳ ಪೂರ್ವದ ಕನಸಿಂದು ನನಸಾಗಿದ್ದು ಮುದ ನೀಡಿದೆ. ಮುಂದೆಯೂ ಇಂತಹ ಸಾಹಿತ್ಯ ಸೇವೆ ಮುಂದುವರಿಯುವಂತಾಗಲಿ.” ಎನ್ನುತ್ತಾ ಒಂದು ಸಕಾಲಿಕ ಗಜಕ್ ಮತ್ತು ಏಳೆ ಕವನ ವಾಚನ ಮಾಡಿದರು.
    ಕವಿಗಳಾದ ಎಸ್. ಜೆ. ಕುಂಪಲವರಿಂದ ಚಾಲನೆಗೊಂಡ ಕವಿಗೋಷ್ಠಿಯಲ್ಲಿ ಕವಯಿತ್ರಿ ರಶ್ಮಿ ಸನಿಲ್,ಸುಮಂಗಲಾ ಎಸ್. ದಿನೇಶ್ ಶೆಟ್ಟಿ, ಅರ್ಚನಾ ಬಂಗೇರ, ರೇಖಾ ಸುದೇಶ ರಾವ್, ಸೌಮ್ಯಾ ಆರ್. ಶೆಟ್ಟಿ, ಲತೀಶ್ ಸಂಕೊಳಿಗೆ, ಡಿ’ಕೂನ್ಹಾ, ವೆಂಕಟೇಶ್ ಗಟ್ಟಿ, ಚಂದ್ರಿಕಾ ಕೈರಂಗಳ ಮತ್ತಿತರರು ಬಹುವಿಧ ಬಹುಭಾಷಾ ಕವನ ವಾಚನ ಮಾಡಿದರು.

    ರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿ, ವೆಂಕಟೇಶ್ವರ ಗಟ್ಟಿ ಸ್ವಾಗತಿಸಿ ಹಾಗೂ ಧನ್ಯವಾದ ಸಮರ್ಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleವಿಶೇಷ ಲೇಖನ – ಅಂತಾರಾಷ್ಟ್ರೀಯ ನೃತ್ಯ ದಿನ – ಏಪ್ರಿಲ್ 29
    Next Article ಮಂಗಳೂರಿನ ಪತ್ರಿಕಾ ಭವನದಲ್ಲಿ ‘ತಿರುವು’ ಕೃತಿ ಲೋಕಾರ್ಪಣೆ
    roovari

    Add Comment Cancel Reply


    Related Posts

    ಮಕ್ಕಳ ಕಲಾ ಲೋಕದ ಅಧ್ಯಕ್ಷರಾಗಿ ರಮೇಶ ಎಂ. ಬಾಯಾರು

    February 23, 2026

    ಮಂಗಳೂರು ವಿ.ವಿ. ಕಾಲೇಜಿನಲ್ಲಿ ಹಿರಿಯ ಲೇಖಕಿ ರೋಹಿಣಿಗೆ ಅಭಿನಂದನೆ

    February 23, 2026

    ‘ಮಹಾಶ್ವೇತಾದೇವಿ ಜನ್ಮ ಶತಮಾನೋತ್ಸವ ಪ್ರಶಸ್ತಿ’ಗೆ ಕಥಾಸಂಕಲನ ಆಹ್ವಾನ | ಕೊನೆಯ ದಿನಾಂಕ ಮಾರ್ಚ್ 25

    February 23, 2026

    ಜೋಕ್ಲೆನ ಬಹುಭಾಷಾ ಕವಿಗೋಷ್ಠಿ ಬೊಕ ಕಬಿತೆ ಪುಟ್ಟುನ ಗುಟ್ಟೆಂಚಾ ಕಜ್ಜಕೊಟ್ಯ

    February 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.