ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಉಡುಪಿ ತಾಲೂಕು ಘಟಕದ ‘ಮನೆಯೇ ಗ್ರಂಥಾಲಯ’ ಅಭಿಯಾನದ 125ನೇ ಕೇಂದ್ರದ ಉದ್ಘಾಟನಾ ಸಮಾರಂಭವು ದಿನಾಂಕ 02 ಡಿಸೆಂಬರ್ 2024ರ ಸೋಮವಾರದಂದು ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮಾತನಾಡಿ “ಡಿಜಿಟಲ್ ಮಾಧ್ಯಮಗಳಿಂದಾಗಿ ಇಂದು ಪುಸ್ತಕ ಓದುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಕೈಯಲ್ಲಿ ಪುಸ್ತಕ ಹಿಡಿದು ಓದುವಾಗ ಲಭಿಸುವ ಸಂತಸ ಮೊಬೈಲ್ ನೋಡಿ ಓದುವಾಗ ಲಭಿಸದು. ಯುವ ಸಮುದಾಯ ಸೇರಿದಂತೆ ಎಲ್ಲ ವಯೋಮಾನದವರು ಪುಸ್ತಕ ಓದುವ ಸಂಸ್ಕೃತಿ ಮುಂದುವರಿಸಬೇಕು. ಜಿಲ್ಲಾಡಳಿತದಲ್ಲಿ ಎಲ್ಲ ಇಲಾಖೆ ಇರುವುದರಿಂದ ಸದ್ಯ ಸ್ಥಳಾವಕಾಶದ ಕೊರತೆ ಇದೆ. ಮುಂದಿನ ದಿನಗಳಲ್ಲಿ ಗ್ರಂಥಾಲಯಕ್ಕಾಗಿಯೇ ಒಂದು ಕೊಠಡಿ ಮೀಸಲಿಡಲು ಪ್ರಯತ್ನಿಸಲಾಗುವುದು.”ಎಂದು ಭರವಸೆ ನೀಡಿದರು.
ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ “ಘಟಕದ ಎಲ್ಲಾ ಉತ್ಸಾಹಿ ಪದಾಧಿಕಾರಿಗಳ ಸಹಕಾರದಲ್ಲಿ ಕನ್ನಡದ ಸೇವೆಗಾಗಿ ಜಿಲ್ಲಾ ಘಟಕದ ಸಹಕಾರದಿಂದ ವಿನೂತನ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಮಣಿಪಾಲ ರೇಡಿಯೋದಲ್ಲಿ ‘ಕಥೆ ಕೇಳೋಣ’ ಸರಣಿ, ಎಲ್ಲರೂ ಪುಸ್ತಕ ಓದುವಂತಾಗ ಬೇಕು ಎಂದು ‘ಮನೆಯೇ ಗ್ರಂಥಾಲಯ’ ಅಭಿಯಾನ ಕೈಗೊಂಡಿದ್ದೇವೆ. ಕನ್ನಡಕ್ಕಾಗಿ ಹಾಗೂ ಕನ್ನಡಾಂಬೆಯ ಸೇವೆಗೆ ಲಭಿಸಿದ ಅವಕಾಶದ ಸದುಪಯೋಗ ಮಾಡುತ್ತಿದ್ದೇವೆ. ಕನ್ನಡದ ಸಂಸ್ಕೃತಿ ಉಳಿಸಲು ಎಲ್ಲರೂ ಶ್ರಮಿಸೋಣ.” ಎಂದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಡಿ. ಸಿ. ಕಚೇರಿಯ ಗ್ರಂಥಾಲಯಕ್ಕಾಗಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಪುಸ್ತಕಗಳನ್ನು ಹಸ್ತಾಂತರಿಸಿ, ಶುಭ ಕೋರಿದರು. ಅನೇಕ ಸಾಹಿತಿಗಳು ಗ್ರಂಥಾಲಯಕ್ಕೆ ತಮ್ಮ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರಿಂದ ಪುಸ್ತಕ ಸ್ವೀಕರಿಸುವ ಮೂಲಕ ‘ಮನೆಯೇ ಗ್ರಂಥಾಲಯ’ದ 125ನೇ ಕೇಂದ್ರವನ್ನು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ ಶೆಣ್ಣೆ, ಉಡುಪಿ ನಗರ ಗ್ರಂಥಾಲಯದ ಮುಖ್ಯಸ್ಥೆ ನಳಿನಿ, ಕ. ಸಾ. ಪ. ಘಟಕದ ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಜಿಲ್ಲಾ ಗ್ರಂಥಾಲಯದ ಮುಖ್ಯಸ್ಥೆ ಜಯಶ್ರೀ, ಕ. ಸಾ. ಪ. ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ, ಕ. ಸಾ. ಪ. ಉಡುಪಿ ತಾಲೂಕು ಇದರ ಪ್ರಚಾರ ಸಮಿತಿಯ ಕಿರಣ್ ಮಂಜನ ಬೈಲು, ಆಸ್ಟ್ರೋ ಮೋಹನ್, ಜಾಲತಾಣ ಸಂಚಾಲಕ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ‘ಕಥೆ ಕೇಳೋಣ’ ಸರಣಿಯ ಸಂಚಾಲಕ ಸತೀಶ್ ಕೊಡವೂರು, ನಾಗರಾಜ್ ಹೆಬ್ಬಾರ್, ವಸಂತ್, ಪ್ರೊ. ಶಂಕರ್, ಶ್ರೀನಿವಾಸ ಉಪಾಧ್ಯ, ದೀಪ ಕರ್ಕಿ, ಪ್ರಭಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು
ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿ, ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ವಂದಿಸಿದರು.
Subscribe to Updates
Get the latest creative news from FooBar about art, design and business.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ‘ಮನೆಯೇ ಗ್ರಂಥಾಲಯ’ ಅಭಿಯಾನದ 125ನೇ ಕೇಂದ್ರದ ಉದ್ಘಾಟನೆ
No Comments2 Mins Read
Previous Articleಮಂಗಳೂರಿನಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ಸ್ಪರ್ಧೆ ‘ಬಾಲ ಪ್ರತಿಭಾ 2024’
Next Article ಯಕ್ಷಗಾನ ಕಲಾವಿದ ಎಚ್. ಕೆ. ವಸಂತ ಭಟ್ ನಿಧನ.
Related Posts
Comments are closed.