ಮಂಗಳೂರು : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ಕ್ವಿಜಿಂಗ್ ಫೌಂಡೇಶನ್ ವತಿಯಿಂದ ಆಗಸ್ಟ್ 13ರಂದು ಪಾಂಡೇಶ್ವರ ಫಿಜಾ ಬೈ ನೆಕ್ಸಸ್ ಮಾಲ್‌ನಲ್ಲಿ ‘ಅಲ್ಟಿಮೇಟ್ ಇಂಡಿಯಾ ರಸಪ್ರಶ್ನೆ’ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯು ಶಾಲಾ ಮಕ್ಕಳಿಗಾಗಿ (10ನೇ ತರಗತಿಯವರೆಗೆ) ಮತ್ತು ಮುಕ್ತ ಹೀಗೆ ಎರಡು ವಿಭಾಗದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ಬೆಳಗ್ಗೆ 10 ಗಂಟೆಗೆ ಮತ್ತು ಸಾರ್ವಜನಿಕರಿಗೆ ಅಪರಾಹ್ನ 2 ಗಂಟೆಗೆ ಸ್ಪರ್ಧೆ ನಡೆಯಲಿದೆ. ರಸ ಪ್ರಶ್ನೆಯು ಭಾರತಕ್ಕೆ ಕೇಂದ್ರೀಕೃತವಾಗಿದೆ. ಎರಡೂ ವಿಭಾಗದಲ್ಲೂ ಮುಕ್ತ ಪ್ರವೇಶವಿದೆ. ರಸ ಪ್ರಶ್ನೆ ಇಂಗ್ಲಿಷ್‌ನಲ್ಲಿ ನಡೆಯಲಿದ್ದು, ಮೊದಲಿಗೆ ಲಿಖಿತ ಸುತ್ತು ನಡೆಯಲಿದೆ.
ಆಯ್ಕೆಯಾದ ಮೊದಲ 6 ತಂಡಗಳು ಅಂತಿಮ ಸ್ಪರ್ಧೆಗೆ ಅರ್ಹತೆ ಪಡೆಯಲಿವೆ. ಫೈನಲ್‌ನಲ್ಲಿ ‘ಪೆಹಚಾನ್ ಕೌನ್’, ‘ಹಿಟ್ ಲಿಸ್ಟ್ ಕ್ರಾಸ್ ಕನೆಕ್ಷನ್’ ಮತ್ತು ‘ತೂ ತೂ ಮೈಮೈ’ನಂತಹ ಆಸಕ್ತಿದಾಯಕ ಸುತ್ತಗಳಿವೆ. ಸಾರ್ವಜನಿಕರ ವಿಭಾಗದಲ್ಲಿ ಮೊದಲ ಮೂರು ತಂಡಗಳಿಗೆ ಒಟ್ಟು ರೂ.50,000/- ಮೌಲ್ಯದ ನಗದು ಬಹುಮಾನ ದೊರೆಯಲಿದ್ದು, ಶಾಲಾ ರಸಪ್ರಶ್ನೆ ವಿಭಾಗದಲ್ಲಿ ವಿಜೇತರಿಗೆ 30 ಸಾವಿರ ರೂ. ಮೌಲ್ಯದ ಬಹುಮಾನಗಳು ದೊರೆಯಲಿವೆ. ಆಸಕ್ತ ತಂಡಗಳು www.tinyurl.com/open-quiz ಅಥವಾ www.tinyurl.com/schoo-quizನಲ್ಲಿ ನೋಂದಣಿ ಮಾಡಬಹುದು.