ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸುವ ಪಂಜೆ ಮಂಗೇಶರಾಯರು ಹಾಗೂ ಕೃತಿಗಳ ಅವಲೋಕನ ಕಾರ್ಯಾಕ್ರಮವು ದಿನಾಂಕ 12 ಅಕ್ಟೋಬರ್ 2025ರಂದು ಬೆಳಿಗ್ಗೆ ಗಂಟೆ 9-30ಕ್ಕೆ ಮಂಗಳೂರಿನ ಉರ್ವಾ ಮಾರ್ಕೆಟ್ ಬಳಿ ಇರುವ ಶ್ರೀ ಸಿದ್ಧಿವಿನಾಯಕ ಕೃಪಾ ಇಲ್ಲಿ ನಡೆಯಲಿದೆ.
ದ. ಕ. ಜಿಲ್ಲಾ ಕ. ಸಾ. ಪ. ಇದರ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ನಿವೃತ್ತ ಪ್ರೌಢ ಶಾಲಾ ಶಿಕ್ಷಕಿ ಹಾಗೂ ಸಾಮಾಜಿಕ ಚಿಂತಕಿಯಾದ ಶ್ರೀಮತಿ ಕೆ. ಎ. ರೋಹಿಣಿ ಉದ್ಘಾಟಿಸಲಿದ್ದಾರೆ. ಪಂಜೆ ಬಗ್ಗೆ ಅವಲೋಕನವನ್ನು ವಿಶ್ರಾಂತ ಪ್ರಾಧ್ಯಾಪಕರಾದ ಪುತ್ತೂರಿನ ಡಾ. ವರದರಾಜ ಚಂದ್ರಗಿರಿ ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿವೃತ್ತ ಅಕಾಶವಾಣಿ ನಿರ್ದೇಶಕರಾದ ಡಾ. ವಸಂತಕುಮಾರ್ ಪೆರ್ಲ, ಎ.ಪಿ.ಎಸ್. ವಿದ್ಯಾಸಂಸ್ಥೆ ಬೆಂಗಳೂರು ಇಲ್ಲಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಪ್ರಮೀಳಾ ಮಾಧವ್, ಬೆಸೆಂಟ್ ಮಹಿಳಾ ಕಾಲೇಜು ಮಂಗಳೂರು ಇಲ್ಲಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ರಾಮಚಂದ್ರ, ಮಂಗಳೂರಿನ ‘ಅಮೃತ ಪ್ರಕಾಶ’ ಮಾಸಿಕ ಪತ್ರಿಕೆಯ ಸಂಪಾದಕಿಯಾದ ಡಾ. ಮಾಲತಿ ಶೆಟ್ಟಿ ಮಾಣೂರು, ಮಂಗಳೂರು ತಾಲೂಕು ಘಟಕ ಕ. ಸಾ. ಪ. ಇದರ ಅಧ್ಯಕ್ಷರಾದ ಡಾ. ಮಂಜುನಾಥ್ ರೇವಣ್‌ಕರ್ ಉಪಸ್ಥಿತರಿರುವರು.
ಸಭಾ ಕಾರ್ಯಕ್ರಮದ ಬಳಿಕ ಹಿರಿಯ ಕವಯಿತ್ರಿ ಶ್ರೀಮತಿ ಸತ್ಯವತಿ ಕೊಳಚಪ್ಪು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು, ಕವಯಿತ್ರಿ ಹಾಗೂ ನಿವೃತ್ತ ಪ್ರೌಢ ಶಾಲಾ ಶಿಕ್ಷಕಿ ಶ್ರೀಮತಿ ಸುಧಾ ನಾಗೇಶ್, ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಲೇಖಕಿಯಾಗಿರುವ ಶ್ರೀಮತಿ ನಳಿನಿ ಪೈ, ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಕವಯಿತ್ರಿಯಾದ ಶ್ರೀಮತಿ ವಿದ್ಯಾ ಗಣೇಶ್, ಬ್ಯಾಂಕ್ ಉದ್ಯೋಗಿ ಹಾಗೂ ಕವಯತ್ರಿಯಾದ ಶ್ರೀಮತಿ ಆಕೃತಿ ಐ. ಎಸ್. ಭಟ್, ಕ. ಸಾ. ಪ. ಮಂಗಳೂರು ತಾಲೂಕು ಘಟಕದ ಕೋಶಾಧ್ಯಕ್ಷರಾದ ಶ್ರೀ ಸುಬ್ರಾಯ ಭಟ್ ತಮ್ಮ ಕವನಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಬೆಸೆಂಟ್ ಪ್ರೌಢ ಶಾಲೆ ಮಂಗಳೂರು ಇಲ್ಲಿನ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಇವರು ಆಶಯ ಗೀತೆ ಹಾಡಲಿದ್ದು, ಸ್ವಾಗತ ಹಾಗೂ ನಿರೂಪಣೆಯನ್ನು ದ.ಕ.ಜಿಲ್ಲಾ ಕ.ಸಾ.ಪ. ಇದರ ಸದಸ್ಯೆಯಾದ ಡಾ. ಅರುಣಾ ನಾಗರಾಜ್ ನಿರ್ವಹಿಸಲಿದ್ದಾರೆ.


