ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡಮಿ (ರಿ.) ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ (ರಿ.) ಈ ಸಂಸ್ಥೆಗಳು ಜಂಟಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ನಡೆಸಿಕೊಂಡು ಬರುತ್ತಿರುವ ‘ಉದಯರಾಗ – 45’ನೇ ಸಂಗೀತ ಕಛೇರಿಯು ಸುರತ್ಕಲ್ ನ ‘ಅನುಪಲ್ಲವಿ’ಯಲ್ಲಿ ದಿನಾಂಕ 15-10-2023 ಭಾನುವಾರ ಪೂರ್ವಾಹ್ನ ಗಂಟೆ 6ಕ್ಕೆ ನಡೆಯಲಿದೆ. ತನ್ಮಯೀ ಉಪ್ಪಂಗಳ ಇವರ ವಯಲಿನ್ ಕಛೇರಿಗೆ ಪ್ರಣವ್ ಸುಬ್ರಹ್ಮಣ್ಯ ಮೃದಂಗದಲ್ಲಿ, ಸುಮುಖ ಕಾರಂತ್ ಖಂಜೀರದಲ್ಲಿ ಮತ್ತು ಸುಜಾತ ಎಸ್. ಭಟ್ ತಂಬೂರದಲ್ಲಿ ಸಾಥ್ ನೀಡಲಿದ್ದಾರೆ.
ಪರಮಪೂಜ್ಯ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಆಶ್ರಯ ಮತ್ತು ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಅರ್ಪಿಸುವ ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ರಚಿಸಲಾದ ಆಯ್ದ ಕೃತಿಗಳ ಬಗ್ಗೆ ‘ಕಾರ್ಯಾಗಾರ’ವನ್ನು ಚೆನ್ನೈಯ ವಿದುಷಿ ಪ್ರಾರ್ಥನಾ ಸಾಯಿ ನರಸಿಂಹನ್ ಇವರು ಅದೇ ದಿನ ಬೆಳಿಗ್ಗೆ 10 ಘಂಟೆಯಿಂದ ನಡೆಸಲಿದ್ದಾರೆ. ಸಂಗೀತಾಭ್ಯಾಸಿಗಳಿಗೆ ಮುಕ್ತ ಪ್ರವೇಶವಿದೆ.
ಮಣಿ ಕೃಷ್ಣಸ್ವಾಮಿ, ಆಕಾಡಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.