ಮಂಗಳೂರು : ಸಿಂಗಾಪುರದ ಪ್ರತಿಷ್ಟಿತ ಅಂತರ್ ಸಾಂಸ್ಕೃತಿಕ ರಂಗ ಅಧ್ಯಯನ ಸಂಸ್ಥೆಯು (Intercultural Theatre Institute) ಆಯೋಜಿಸುವ ಮೂರು ವರ್ಷಗಳ ವೃತ್ತಿಪರ ನಾಟಕ ತರಬೇತಿಗೆ ಮಂಗಳೂರು ದೇರೇಬೈಲ್ ನಿವಾಸಿ ಮನೀಷ್ ಗೊಡ್ಲಿನ್ ಪಿಂಟೊ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ಸಂದರ್ಶನದ ಮುಖಾಂತರ ಈ ಆಯ್ಕೆ ನಡೆದಿದೆ.
ಏಶಿಯಾದ ಪ್ರಮುಖ ಸಾಂಪ್ರದಾಯಿಕ ಕಲಾ ಪ್ರಕಾರಗಳಾದ ಜಪಾನಿನ ನೊ ಥಿಯೇಟರ್, ಚೀನಾದ ಬೀಜಿಂಗ್ ಒಪೆರಾ ಮತ್ತು ಥಾಯ್ಚೀ, ಇಂಡೋನೇಶ್ಯಾದ ವಯಾಂಗ್ ವೊಂಗ್, ಭಾರತದ ಕುಡಿಯಾಟ್ಟಂ ಇತ್ಯಾದಿ ಈ ತರಬೇತಿಯಲ್ಲಿ ಒಳಗೊಂಡಿದೆ. ಅದೇ ರೀತಿ ಸಮಕಾಲೀನ ರಂಗಭೂಮಿಯ ಬಗ್ಗೆ ಸಮಗ್ರ ಕಲಿಕೆ ಇರಲಿದ್ದು, ನಟನೆ, ಆಂಗಿಕ ಅಭಿನಯ, ಧ್ವನಿ ನಿಯಂತ್ರಣ, ರಂಗಭೂಮಿಯ ತಾಂತ್ರಿಕತೆಗಳು ಕೂಡಾ ಕಲಿಕೆಯ ಭಾಗವಾಗಿವೆ. ಸಂಸ್ಥೆಯ ತರಬೇತಿಗೆ ಇದುವರೆಗೆ ಕರ್ನಾಟಕದಿಂದ ಆಯ್ಕೆಯಾದ ಮೂರನೇ ರಂಗಕರ್ಮಿ ಮನೀಷ್.
ಮನೀಷ್ ಇವರು ಮಾಂಡ್ ಸೊಭಾಣ್ ಪ್ರವರ್ತಿತ ನಾಟಕ ರೆಪರ್ಟರಿ ಕಲಾಕುಲ್ ಇದರ ಹಳೆ ವಿದ್ಯಾರ್ಥಿಯಾಗಿದ್ದು, 2019 ರ ಸಾಲಿನ `ಶ್ರೇಷ್ಟ ಕಲಾ ವಿದ್ಯಾರ್ಥಿ’ ಪ್ರಶಸ್ತಿ ಪಡೆದಿದ್ದರು. 2022 – 23 ನೇ ರಾಷ್ಟ್ರೀಯ ನಾಟಕ ಶಾಲೆ (ತ್ರಿಪುರ) ಇಲ್ಲಿಂದ ಪದವಿ ಪಡೆದಿದ್ದಾರೆ. ನಂತರ ಮಣಿಪುರ, ತ್ರಿಪುರ, ಕಾಶ್ಮೀರ ಇಲ್ಲಿ ತಾನೇ ಸ್ವತಃ ರಂಗ ತರಬೇತಿ ನೀಡಿದ್ದಾರೆ. ಎನ್. ಎಸ್. ಡಿ. ಇದರ ಅಂತರಾಷ್ಟ್ರೀಯ ನಾಟಕ ‘ಹಬ್ಬ ಭಾರತ್ ರಂಗ್ ಮಹೋತ್ಸವ’ದಲ್ಲಿ ಭಾಗವಹಿಸಿದ್ದಾರೆ. ಇದುವರೆಗೆ ಕೊಂಕಣಿ, ಕನ್ನಡ, ತುಳು, ಹಿಂದಿ ಮತ್ತಿತರ ಭಾಷೆಯ ಇಪ್ಪತ್ತಕ್ಕೂ ಮಿಕ್ಕಿ ನಾಟಕಗಳಲ್ಲಿ ನಟನೆ ಮಾಡಿದ್ದಾರೆ. ನಾಲ್ಕು ನಾಟಕಗಳಿಗೆ ನಿರ್ದೇಶನ ನೀಡಿರುವುದು ಇವರ ಹೆಗ್ಗಳಿಕೆ.
Subscribe to Updates
Get the latest creative news from FooBar about art, design and business.
Related Posts
Comments are closed.