ಸುರತ್ಕಲ್: ಶ್ರೀ ನಾಟ್ಯಾಂಜಲಿ ಕಲಾ ಅಕಾಡಮಿ ಸುರತ್ಕಲ್, ಖಂಡಿಗೆ, ಚೇಳ್ಳಾರು ಮತ್ತು ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಪ್ರಸ್ತುತಪಡಿಸುವ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳನ್ನಾಧರಿಸಿದ 21ನೇ ಸಂಗೀತ ಕಛೇರಿ ‘ಮಂಜುನಾದ’ ದಿನಾಂಕ 10-12-2023ರ ಭಾನುವಾರ ಸಂಜೆ ಘಂಟೆ 5.25 ರಿಂದ ಖಂಡಿಗೆ, ಚೇಳ್ಳಾರು ರಸ್ತೆಯಲ್ಲಿರುವ ನಾಟ್ಯಾಂಜಲಿ ಕಲಾಮಂದಿರದಲ್ಲಿ ನಡೆಯಲಿದೆ.
ಶಾಂತಲಾ ನಾಟ್ಯಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಮೋಹನ್ ಕುಮಾರ್ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಎಂ ನಾರಾಯಣ, ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ) ಮತ್ತು ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಇದರ ಗೌರವ್ಯಾಧ್ಯಕ್ಷರಾದ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹಾಗೂ ಮಣಿ ಕೃಷ್ಣಸ್ವಾಮಿ ಅಕಾಡೆಮಿ(ರಿ) ಇದರ ಅಧ್ಯಕ್ಷರಾದ ಕ್ಯಾ. ಗಣೇಶ್ ಕಾರ್ಣಿಕ್ ಭಾಗವಹಿಸಲಿದ್ದಾರೆ.
ಬಳಿಕ ನಡೆಯಲಿರುವ ಸಂಗೀತ ಕಛೇರಿಯಲ್ಲಿ ಬೆಂಗಳೂರಿನ ಅದಿತಿ ಪ್ರಹ್ಲಾದ್ ಹಾಗೂ ಸ್ಮೃತಿ ಭಾಸ್ಕರ್, ಕಿನ್ನಿಗೋಳಿಯ ಆಶ್ಮೀಜಾ ಉಡುಪ ಮತ್ತು ಮಂಗಳೂರಿನ ಮೇಧಾ ಉಡುಪ ಹಾಡುಗಾರಿಕೆ ನಡೆಸಲಿದ್ದು, ಇವರಿಗೆ ವಯಲಿನ್ ನಲ್ಲಿ ತನ್ಮಯೀ ಉಪ್ಪಂಗಳ, ಪುತ್ತೂರು, ಮೃದಂಗದಲ್ಲಿ ಪ್ರಣವ್ ಸುಬ್ರಹ್ಮಣ್ಯ ಮೈಸೂರು ಹಾಗೂ ಖಂಜಿರದಲ್ಲಿ ಸುಮುಖ ಕಾರಂತ, ಸುರತ್ಕಲ್ ಸಾಥ್ ನೀಡಲಿದ್ದಾರೆ.

