ಗೋಕರ್ಣ : ಪರಮಪೂಜ್ಯ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಶ್ರೀರಾಮಚಂದ್ರಾಪುರ ಮಠ ಇವರ ಆಶ್ರಯ ಮತ್ತು ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಪ್ರಸ್ತುತ ಪಡಿಸುವ ”ಮಂಜುನಾದ” ಸಂಗೀತ ಕಛೇರಿಯು ದಿನಾಂಕ 26-08-2023 ಶನಿವಾರ ಮಧ್ಯಾಹ್ನ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರ, ಅಶೋಕೆ, ಗೋಕರ್ಣ ಇಲ್ಲಿ ನಡೆಯಲಿದೆ.
ಪ್ರಸಿದ್ಧ ಸಂಗೀತಗಾರ ಡಾ. ರಾಜಕುಮಾರ್ ಭಾರತಿಯವರ ಮಾರ್ಗದರ್ಶನದಲ್ಲಿ ರಚಿತವಾದ ಐದು ಕೃತಿಗಳನ್ನು ಡಾ.ಡಿ.ವೀರೇಂದ್ರ ಹೆಗ್ಗಡೆಯವರು ದಿನಾಂಕ 14-08-2022ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದ್ದರು. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 25 ಕೃತಿಗಳನ್ನು ರಚಿಸಿ ಜನಪ್ರಿಯಗೊಳಿಸುವ ‘ಮಂಜುನಾದ’ ಯೋಜನೆಯ ಪ್ರಥಮ ಭಾಗ ಇದಾಗಿತ್ತು. ಈಗಾಗಲೇ ರಾಜ್ಯದ ವಿವಿಧೆಡೆ 15 ಕಛೇರಿಗಳು ನಡೆದಿದ್ದು, ಇದು 16ನೆಯ ಸಂಗೀತ ಕಛೇರಿಯಾಗಿರುತ್ತದೆ.
‘ಮಂಜುನಾದ’ ಸಂಗೀತ ಕಛೇರಿಯ ಹಾಡುಗಾರಿಕೆಯಲ್ಲಿ ಉಷಾ ರಾಮಕೃಷ್ಣ ಭಟ್ ಮಣಿಪಾಲ, ಅದಿತಿ ಪ್ರಹ್ಲಾದ್ ಬೆಂಗಳೂರು, ಆಶ್ವೀಜಾ ಉಡುಪ ಕಿನ್ನಿಗೋಳಿ, ಮೇಧಾ ಉಡುಪ ಮಂಗಳೂರು ಮತ್ತು ಶರಣ್ಯಾ ಕೆ.ಎನ್. ಸುರತ್ಕಲ್, ವಯಲಿನ್ ನಲ್ಲಿ ಸುನಾದ ಪಿ.ಎಸ್. ಮಾವೆ, ಮೃದಂಗದಲ್ಲಿ ಪನ್ನಗ ಶರ್ಮನ್ ಶೃಂಗೇರಿ ಹಾಗೂ ತಂಬೂರದಲ್ಲಿ ಸುಜಾತ ಎಸ್. ಭಟ್ ಸುರತ್ಕಲ್ ಸಹಕರಿಸಲಿರುವರು.