ಗೋಕರ್ಣ : ಪೂಜ್ಯ ರಾಘವೇಶ್ವರ ಸ್ವಾಮೀಜಿಯವರ ಚಾತುರ್ಮಾಸ ವ್ರತದ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳ ಆಧಾರಿತ ‘ಮಂಜುನಾದ’ ಸಂಗೀತ ಕಛೇರಿ ದಿನಾಂಕ 26-08-2023ರಂದು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಿಸರದಲ್ಲಿ ನಡೆಯಿತು. ಸುಮಾರು ಒಂದು ಒಂದು ಘಂಟೆ ಮೂವತ್ತು ನಿಮಿಷಗಳ ಕಾಲ ನಡೆದ ಈ ಕಛೇರಿಯ ಹಾಡುಗಾರಿಕೆಯಲ್ಲಿ ಮಣಿಪಾಲದ ಉಷಾ ರಾಮಕೃಷ್ಣ ಭಟ್, ಬೆಂಗಳೂರಿನ ಅದಿತಿ ಪ್ರಹ್ಲಾದ್, ಕಿನ್ನಿಗೋಳಿಯ ಆಶ್ವೀಜಾ ಉಡುಪ, ಮಂಗಳೂರಿನ ಮೇಧಾ ಉಡುಪ, ವಯಲಿನ್ ನಲ್ಲಿ ಮಾವೆಯ ಸುನಾದ ಪಿ.ಎಸ್, ಮೃದಂಗದಲ್ಲಿ ಶೃಂಗೇರಿಯ ಪನ್ನಗ ಶರ್ಮನ್ ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಅಮೆರಿಕದಲ್ಲಿರುವ ಸಂಗೀತ ಅಭ್ಯಾಸಿಗಳಿಗಾಗಿ ‘ಮಂಜುನಾದ’ ಕೃತಿಯನ್ನು ಕಲಿಸುವ ಉದ್ದೇಶದಿಂದ ರೂಪಿಸಿದ www.manjunada.com ಇದರ ಲೋಕಾರ್ಪಣಾ ಕಾರ್ಯಕ್ರಮವನ್ನು ಪೂಜ್ಯ ರಾಘವೇಶ್ವರ ಸ್ವಾಮೀಜಿಯವರು ನೆರವೇರಿಸಿದರು.