ಮಂಗಳೂರು : ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು, ಇದರ ವತಿಯಿಂದ ಶ್ರೀಮತಿ ವಜ್ರ ರಾವ್ ಇವರ ಲೇಖನ ಸಂಕಲನ ‘ಮರೆಯದ ಮಾತುಗಳು’ ಅಮೃತ ಪ್ರಕಾಶ 44ನೇ ಸರಣಿ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಮಂಗಳೂರಿನ ಪತ್ರಿಕಾ ಭವನದಲ್ಲಿ ದಿನಾಂಕ 27 ಮೇ 2025ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರು ಹಾಗೂ ಲೇಖಕರು ಮಂಗಳೂರಿನ ಹರಿಕಥಾ ಪರಿಷತ್ (ರಿ.) ಇದರ ಅಧ್ಯಕ್ಷರಾದ ಮಹಾಬಲ ಶೆಟ್ಟಿ ವಹಿಸಿದ್ದರು. ಲೇಖಕರು ಹಾಗೂ ಐ.ಸಿ.ಎ.ಐ. ಮಂಗಳೂರು ಇದರ ಮಾಜಿ ಚೇಯರ್ಮಾನ್ ಎಸ್.ಎಸ್. ನಾಯಕ್ ಇವರು ‘ಮರೆಯದ ಮಾತುಗಳು’ ಕೃತಿ ಬಿಡುಗಡೆಗೊಳಿಸಿದರು. ಕೃತಿಯ ಲೇಖಕಿ ಶ್ರೀಮತಿ ವಜ್ರಾ ರಾವ್, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು, ಕವಿಯತ್ರಿ ಶಿಕ್ಷಕಿ ಸುರೇಖಾ ಯಾಳವಾರ ಉಪಸ್ಥಿತರಿದ್ದರು. ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿ, ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸಿದರು.