ಮೈಸೂರು : ಆಯಾಮ ಅಕಾಡೆಮಿ ಮೈಸೂರು ಮತ್ತು ಶ್ರೀ ಹರ್ಷ ಪ್ರಕಾಶನ ಶ್ರೀರಂಗಪಟ್ಟಣ ಇವರ ಸಹಯೋಗದಲ್ಲಿ ಸಾ. ವೆ. ರ. ಸ್ವಾಮಿಯವರ ‘ಮರೆಯೋದುಂಟ ಈ ಸಕಲೆಂಟ’ ಪುಸ್ತಕದ ಲೋಕರ್ಪಣಾ ಸಮಾರಂಭವು ದಿನಾಂಕ 16 ನವೆಂಬರ್ 2024ರ ಶನಿವಾರ ಬೆಳಗ್ಗೆ 10.30ಕ್ಕೆ ಮೈಸೂರಿನ ಆಯಾಮ ಅಕಾಡೆಮಿ ಕಲಾ ಕುಟೀರದಲ್ಲಿ ನಡೆಯಿತು.
ಕನ್ನಡ ಸಾಹಿತಿ ಮತ್ತು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ. ಕಾಳೇಗೌಡ ನಾಗವಾರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಸಿ. ಮಹದೇವು, ಕನ್ನಡ ಸಾಹಿತಿ, ಉಪನ್ಯಾಸಕ ಹಾಗೂ ಸಿನಿಮಾ ನಿರ್ದೇಶಕರಾದ ಡಾ. ರಾಗಂ ಬೆಂಗಳೂರು, ನಿರಂತರ ಮೈಸೂರುಇಲ್ಲಿನ ರಂಗ ನಿರ್ದೇಶಕರಾದ ಶ್ರೀಯುತ ಪ್ರಸಾದ್ ಕೂಂದುರ್, ನಿವೃತ್ತ ಶಿಕ್ಷಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಶ್ರೀರಂಗಪಟ್ಟಣ ತಾಲ್ಲೂಕು ಇಲ್ಲಿನ ಅಧ್ಯಕ್ಷರಾದ ಶ್ರೀಯುತ ಸಿದ್ದಲಿಂಗ ಹಾಗೂ ಲಲಿತಕಲಾ ಕಾಲೇಜು ಮೈಸೂರು ವಿದ್ಯಾನಿಲಯ ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ವಿದುಷಿ ಡಾ. ಶಾಂಭವಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ “ಮರೆಯೋ ದುಂಟ ಈ ಸಕಲೆಂಟ!” ಕವನ ಸಂಕಲದಲ್ಲಿ ಸಾ. ವೆ. ರ. ಸ್ವಾಮಿಯವರು ಮಂಡ್ಯದ ಮಣ್ಣಿನ ಸಾಂಸ್ಕೃತಿಕ ಸಾಹಿತಿಕ ಹಾಗೂ ಭೌಗೋಳಿಕ ವೈಶಿಷ್ಟ್ಯತೆಯನ್ನ ಕಾಪಿಟ್ಟುಕೊಂಡು ಬಹು ಸಂಸ್ಕೃತಿಯ ನೆಲದ ಮಣ್ಣಿನ ವಾಸನೆಯನ್ನು ದಾಖಲಿಸಿದ್ದಾರೆ. ಪುಟ್ಟ ಪುಟ್ಟ ಪದ್ಯಗಳಲ್ಲಿ ನಾಲ್ಕಾರು ಸಾಲುಗಳಲ್ಲಿ ನಮ್ಮ ಹಿಂದಿನ ಆಚಾರ ವಿಚಾರಗಳನ್ನು ನೆನಪಿಸಿಕೊಳ್ಳಬೇಕು ಅನ್ನೋದನ್ನ ಚೆನ್ನಾಗಿ ನಿರೂಪಿಸಿದ್ದಾರೆ. ನಮ್ಮ ಹಿಂದಿನವರು ಬಳಸುತ್ತಿದ್ದ ಭಾಷೆಯ ಸೊಗಡನ್ನು ಇಲ್ಲಿ ಕಾಣಬಹುದು. ಭಾಷೆ ಆಚಾರ ವಿಚಾರ ನೋವು ನಲಿವುಗಳನೆಲ್ಲ ಚೆನ್ನಾಗಿ ದಾಖಲಿಸಿದ್ದಾರೆ.” ಎಂದರು.
ಕಾರ್ಯಕ್ರಮವನ್ನು ಸಿನೆಮಾ ನಿರ್ದೇಶಕರಾದ ಬಲಾ ರಾಜವಾಡಿ ನಿರೂಪಿಸಿದರು.