ಮಂಗಳೂರು : ಸೌರಭ ಸಂಗೀತ ನೃತ್ಯ ಕಲಾ ಪರಿಷತ್ (ರಿ.) ಮಂಗಳೂರು ಪ್ರಸ್ತುತ ಪಡಿಸುವ ‘ಮಾರ್ಗಂ ಮಾಧುರ್ಯಂ’ ಭರತನೃತ್ಯ ಸಮೂಹ ಪ್ರಸ್ತುತಿಯನ್ನು ದಿನಾಂಕ 08 ಫೆಬ್ರವರಿ 2026ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಂಗಳೂರಿನ ನೃತ್ಯ ಭಾರತಿ (ರಿ.) ನಿರ್ದೇಶಕರಾದ ವಿದುಷಿ ಗೀತಾ ಸರಳಾಯ, ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ನಿರ್ದೇಶಕರಾದ ನಿತ್ಯಾನಂದ ರಾವ್ ಮತ್ತು ರೂವಾರಿ ಡಿಜಿಟಲ್ ಪತ್ರಿಕೆಯ ಪ್ರಧಾನ ಸಂಪಾದಕಿ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಿಂದ ಸಮೂಹ ಭರತನೃತ್ಯ ಪ್ರದರ್ಶನ ಹಾಗೂ ದಶಾವತಾರ ನೃತ್ಯರೂಪಕದ ನಟುವಾಂಗ ಮತ್ತು ನಿರ್ದೇಶನ ಗುರು ಡಾ. ಶ್ರೀವಿದ್ಯಾ, ಹಾಡುಗಾರಿಕೆ ವಿದ್ವಾನ್ ವಿನೀತ್ ಪುರವಂಕರ, ಮೃದಂಗದಲ್ಲಿ ವಿದ್ವಾನ್ ರಾಜೀವ್ ಗೋಪಾಲ್, ವೇಣು ವಾದನದಲ್ಲಿ ವಿದ್ವಾನ್ ಮುರಳೀಧರ್ ಸಹಕರಿಸಲಿದ್ದಾರೆ.

