ಬೆಂಗಳೂರು : ಕಲಾ ಕದಂಬ ಆರ್ಟ್ ಸೆಂಟರ್ ಇದರ ವತಿಯಿಂದ ‘ಮಾಸದ ಮೆಲುಕು 153’ ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ದಿನಾಂಕ 20 ಸೆಪ್ಟೆಂಬರ್ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರು ಚಿಕ್ಕಲ್ಲಸಂದ್ರದ ಶ್ರೀ ಸಿದ್ಧಿಗಣಪತಿ ದೇವಾಲಯದ ಮನೋರಂಜನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ನಂಜುಂಡ ಕವಿ ವಿರಚಿತ ‘ವಿರೋಚನ ಕಾಳಗ’ ಯಕ್ಷಗಾನವು ಭರತ್ ಪರ್ಕಳ ಇವರ ನಿರ್ದೇಶನದಲ್ಲಿ ನಡೆಯಲಿದ್ದು, ಹಿಮ್ಮೇಳದಲ್ಲಿ ಸುಬ್ರಾಯ ಹೆಬ್ಬಾರ್, ಅಕ್ಷಯ್ ಆಚಾರ್, ಶ್ರೀನಿವಾಸ್ ಪ್ರಭು ಮತ್ತು ಮುಮ್ಮೇಳದಲ್ಲಿ ಭರತ್ ರಾಜ ಪರ್ಕಳ, ದೇವರಾಜ ಕರಬ, ಪೂಜಾ ಆಚಾರ್ಯ, ಅದಿತಿ ಉರಾಳ, ನಿತ್ಯಾ ಗೌಡ, ಅನೀಶ್ ಸೋಮಯಾಜಿ ಹಾಗೂ ಇತರರು ಸಹಕರಿಸಲಿದ್ದಾರೆ.