Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಶ್ವತ್ಥಾಮ’ | ಜೂನ್ 12

    June 10, 2025

    ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ಶತ ಸಂಭ್ರಮ’ ಮತ್ತು ‘ನುಡಿ ನಮನ’

    June 10, 2025

    ಪ್ರವರ ಮತ್ತು ಅಶ್ವಘೋಷ ಥಿಯೇಟರ್ ವತಿಯಿಂದ ‘ಬೆಂಗಳೂರು ಕಿರುನಾಟಕೋತ್ಸವ’ | ಕೊನೆಯ ದಿನಾಂಕ ಜೂನ್ 27

    June 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಮತ್ತದೇ ಬೇಸರ ಅದೇ ಸಂಜೆ’ ಎಂಬ ದೃಶ್ಯ ಗೀತೆಯ ಬಿಡುಗಡೆ
    Music

    ‘ಮತ್ತದೇ ಬೇಸರ ಅದೇ ಸಂಜೆ’ ಎಂಬ ದೃಶ್ಯ ಗೀತೆಯ ಬಿಡುಗಡೆ

    December 21, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಲಲಿತ ಕಲಾಸಂಘದ ಸಹಕಾರದಲ್ಲಿ ನಡೆದ ಬಾಲ ಪ್ರತಿಭೆಗಳಾದ ಮಾ. ವಿನಮ್ರ ಇಡ್ಕಿದು ಮತ್ತು ಕು. ಅನನ್ಯ ನಾರಾಯಣ್ ಹಾಡಿದ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರ ‘ಮತ್ತದೇ ಬೇಸರ ಅದೇ ಸಂಜೆ’ ಎಂಬ ದೃಶ್ಯ ಗೀತೆಯನ್ನು ಬಿಡುಗಡೆ ಕಾರ್ಯಕ್ರಮ ದಿನಾಂಕ 09-12-2023ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ದೃಶ್ಯ ಗೀತೆಯನ್ನು ಬಿಡುಗಡೆ ಮಾಡಿದ ಭಾವಗೀತೆಗಳ ಯುವ ಕವಿ ರವೀಂದ್ರ ನಾಯಕ್ ಸಣ್ಣಕ್ಕಿ ಬೆಟ್ಟು “ಕವಿಯ ಕವಿತೆಯನ್ನು ಸಂಗೀತದ ಮೂಲಕ ವಾಚನ ಮಾಡುವ ಕ್ರಮವೇ ಭಾವಗೀತೆ. ಅಲ್ಲಿ ವಾದ್ಯದ ಅಬ್ಬರಗಳಿರುವುದಿಲ್ಲ, ಸಾಹಿತ್ಯವೇ ಪ್ರಧಾನ. ಜನರ ಹೃದಯಕ್ಕೆ ಮುಟ್ಟುವುದೇ ಅದರ ಗುಣ. ಬಾಲ ಪ್ರತಿಭೆಗಳಾದ ವಿನಮ್ರ ಇಡ್ಕಿದು ಮತ್ತು ಅನನ್ಯ ನಾರಾಯಣ್ ಕವಿ ನಿಸಾರ್ ಅಹಮ್ಮದ ಕವಿತೆಯನ್ನು ಹೃದಯಕ್ಕೆ ಮುಟ್ಟುವ ಹಾಗೆ ಮತ್ತೆ ಹಾಡಿರುವುದು ಶ್ಲಾಘನೀಯ” ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿಯವರು ಮಾತನಾಡಿ “ಬಾಲ ಪ್ರತಿಭೆಗಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣ ನಮ್ಮಲ್ಲಿ ಬೆಳೆದಾಗ ಮುಂದೆ ಒಳ್ಳೆಯ ಸಂಸ್ಕಾರಯುತ ಕಲಾವಿದರು ಸಂಗೀತಗಾರರು ಮತ್ತು ಸಾಹಿತಿಗಳು ರೂಪುಗೊಳ್ಳಲು ಸಾಧ್ಯ. ಇಂದಿನ ಬಾಲ ಪ್ರತಿಭೆಗಳೇ ಮುಂದಿನ ಕಲಾವಿದರು. ಹಾಗಾಗಿ ಮಕ್ಕಳಲ್ಲಿ ಒಳ್ಳೆಯ ಸಾಂಸ್ಕೃತಿಕ ಪ್ರಜ್ಞೆಯನ್ನು ತುಂಬಿ ಅವರನ್ನು ಚೆನ್ನಾಗಿ ರೂಪಿಸಬೇಕಾದ ಕೆಲಸವನ್ನು ಹೆತ್ತವರು ಮತ್ತು ಹಿರಿಯರು ಮಾಡಬೇಕಿದೆ” ಎಂದು ನುಡಿದರು.

    ಕಾರ್ಯಕ್ರಮದಲ್ಲಿ ಕಥೆಗಾರ ಮಹೇಶ ಆರ್. ನಾಯಕ್, ಸಾಹಿತಿ ರಘು ಇಡ್ಕಿದು, ದೃಶ್ಯ ಗೀತೆಯ ದೃಶ್ಯ ನಿರ್ದೇಶನ, ದೃಶ್ಯ ಸಂಯೋಜನೆ ಮಾಡಿದ ಶ್ರೀಮತಿ ವಿದ್ಯಾ ಯು., ಅಶ್ವಥ್ ನಾರಾಯಣ್, ಶ್ರೀಮತಿ ಜ್ಯೋತ್ಸ್ನಾ ಅಶ್ವತ್ಥ್, ಮಾ.ವಿನಮ್ರ ಇಡ್ಕಿದು, ಕು. ಅನನ್ಯನಾರಾಯಣ್, ಕಾಲೇಜಿನ ಸಾಂಸ್ಕೃತಿಕ ಕೇಂದ್ರದ ವಿನೋದ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಘು ಇಡ್ಕಿದು ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಕೆ.ಎ.ಎಂ. ಅನ್ಸಾರಿಯವರ ಕೃತಿಗಳ ಅನಾವರಣ | ಡಿಸೆಂಬರ್ 28
    Next Article ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಪಾದುಕಾ ಪ್ರದಾನ’ ತಾಳಮದ್ದಳೆ
    roovari

    Add Comment Cancel Reply


    Related Posts

    ಕಾಸರಗೋಡಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ಶತ ಸಂಭ್ರಮ’ ಮತ್ತು ‘ನುಡಿ ನಮನ’

    June 10, 2025

    ಲೇಖನ | ಅಗಲಿದ ಎಚ್.ಎಸ್.ವಿ.ಯವರಿಗೆ ಸಂಭ್ರಮದ ಕವಿ ಕಾವ್ಯ ನಮನ

    June 10, 2025

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮ | ಜೂನ್ 15

    June 10, 2025

    ಬೆಂಗಳೂರಿನ ಸೇವಾ ಸದನದಲ್ಲಿ 19ನೇ ಹಾರ್ಮೋನಿಯಂ ಹಬ್ಬ | ಜೂನ್ 15

    June 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.

    Notifications