ಮಡಿಕೇರಿ : ಉಪನ್ಯಾಸಕಿ ಮತ್ತು ಲೇಖಕಿಯಾದ ಶ್ರೀಮತಿ ಜಯಲಕ್ಷ್ಮೀ ಇವರು ಬರೆದಿರುವ ‘ಮತ್ತೆ ವಸಂತ’ ಕಥಾ ಸಂಕಲನದ ಲೋಕರ್ಪಣಾ ಸಮಾರಂಭವು ದಿನಾಂಕ 26 ಜನವರಿ 2025ರಂದು ರಂದು ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ (ಪಾಕಶಾಲಾ ಮೇಲ್ಭಾಗ )ಸಭಾಂಗಣದಲ್ಲಿ ಬೆಳಗ್ಗೆ ಘಂಟೆ 10.00ಕ್ಕೆ ನಡೆಯಲಿದೆ.
ಕೊಡಗು ಜಿಲ್ಲಾ ಕ. ಸಾ. ಪ. ಇದರ ಮಾಜಿ ಅಧ್ಯಕ್ಷರಾದ ಟಿ. ಪಿ. ರಮೇಶ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಡಿಕೇರಿ ಆಕಾಶವಾಣಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಕಥಾ ಸಂಕಲನವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಮಡಿಕೇರಿ ತಾಲೂಕು ಜಾನಪದ ಪರಿಷತ್ ಇದರ ಅಧ್ಯಕ್ಷರಾದ ಅನಿಲ್ ಎಚ್. ಟಿ. ಕೃತಿ ಪರಿಚಯ ಮಾಡಲಿದ್ದು, ಶಕ್ತಿ ಪತ್ರಿಕೆಯ ಸಂಪಾದಕರಾದ ಜಿ. ಚಿದ್ವಿಲಾಸ್ ಹಾಗೂ ಬೆಳ್ತಂಗಡಿಯ ಎನ್. ಜಯಪ್ರಕಾಶ್ ಶರ್ಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

