ಬ್ರಹ್ಮಾವರ : ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ (ರಿ.) ಬೈಕಾಡಿ, ಬ್ರಹ್ಮಾವರ ಉಡುಪಿ ಇದರ ವತಿಯಿಂದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಇವರ ಸಹಕಾರದಲ್ಲಿ ನಾಟಕ ಪ್ರದರ್ಶನವನ್ನು ದಿನಾಂಕ 08 ಜುಲೈ 2025ರಂದು ಸಂಜೆ 7-00 ಗಂಟೆಗೆ ಬ್ರಹ್ಮಾವರದ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಸತ್ಯಶೋಧನ ರಂಗ ಸಮುದಾಯ ಹೆಗ್ಗೋಡು (ರಿ.) ಇದರ ಜನಮನದಾಟ ಕಲಾವಿದರು ಅಭಿನಯಿಸುವ ರಂಜಿತ್ ಶೆಟ್ಟಿ ಕುಕ್ಕಡೆ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ‘ಮಾಯಾಮೃಗ’ ಮತ್ತು ಡಾ. ಎಂ. ಗಣೇಶ್ ಹೆಗ್ಗೋಡು ಇವರ ನಿರ್ದೇಶನದಲ್ಲಿ ಬೂಕರ್ ವಿಜೇತೆ ಬಾನು ಮುಷ್ತಾಕ್ ಇವರ ಕಥೆಯಾಧಾರಿತ ‘ಎದೆಯ ಹಣತೆ’ ಎಂಬ ಕನ್ನಡ ನಾಟಕಗಳ ಪ್ರದರ್ಶನ ನಡೆಯಲಿದೆ.