ಬ್ರಹ್ಮಾವರ : ಬ್ರಹ್ಮಾವರದ ಬಂಟರ ಭವನದಲ್ಲಿ ದಿನಾಂಕ 09 ಆಗಸ್ಟ್ 2025ರಂದು ‘ನೆನಪು’ ಚೌಕಿಮನೆಯ ಬೆಳಕಿನಲಿ ಒಂದು ಸ್ಮರಣೀಯ ಕಾರ್ಯಕ್ರಮ ನಡೆಯಿತು. ಹವ್ಯಾಸಿ ಯಕ್ಷಗಾನ ತಂಡಗಳಿಗೆ ವೇಷಭೂಷಣವನ್ನು ಬಹಳ ಪ್ರೀತಿಯಿಂದ ಒದಗಿಸಿ, ಈ ಭಾಗದಲ್ಲಿ ಯಕ್ಷಗಾನದ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಹಂದಾಡಿ ಬಾಲಕೃಷ್ಣ ನಾಯಕ್ (ಬಾಲಣ್ಣ) ಇವರ ಪ್ರಥಮ ಪುಣ್ಯತಿಥಿ ಅರ್ಥಪೂರ್ಣವಾಗಿ ಜರಗಿತು.
ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಇಂದ್ರಾಳಿ ಪ್ರಭಾಕರ್ ಆಚಾರ್ಯರಿಗೆ ಬಾಲಣ್ಣನ ನೆನಪಿನಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಯಕ್ಷಶಿಕ್ಷಣ ಅಭಿಯಾನ ಯಶಸ್ವಿಯಾಗುವಲ್ಲಿ ಬಾಲಣ್ಣನ ಕೊಡುಗೆ ಅಪಾರ. ಸಮಾರಂಭದಲ್ಲಿ ಬಲ್ಲಣ್ಣನ ಸುಂದರವಾದ ಪುತ್ಥಳಿಯ ಅನಾವರಣವೂ ನೆರವೇರಿತು. ತಂದೆಯಂತೆ ತಮ್ಮನ್ನು ಯಕ್ಷಗಾನ ಕ್ಷೇತ್ರಕ್ಕೆ ಅರ್ಪಿಸಿಕೊಂಡ ಬಾಲಣ್ಣನ ಮೂವರು ಪುತ್ರರು ಕೂಡ ಅಭಿನಂದನಾರ್ಹರು. ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದವರಿಂದ ‘ಮೀನಾಕ್ಷಿ ಕಲ್ಯಾಣ’ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಂಡಿತು.