ಕಾಸರಗೋಡು : ಚಿನ್ಮಯ ಮಿಷನಿನ ಸಂಸ್ಥಾಪಕ ಚಿನ್ಮಯಾನಂದ ಸ್ವಾಮೀಜಿಯವರ 108ನೇ ಜಯಂತಿಯ ಪ್ರಯುಕ್ತ ಚಿನ್ಮಯ ವಿದ್ಯಾಲಯದಲ್ಲಿ ‘ಚಿನ್ಮಯ ಮಾತೃ ಸಂಸ್ಕೃತಿ ಸೇವಾ ಸಮಿತಿ’ ಯ ಸಂಯುಕ್ತ ಆಶ್ರಯದೊಂದಿಗೆ “ಮೆಗಾ ತಿರುವಾದಿರ”ವು ದಿನಾಂಕ 06-03-2024 ರಂದು ಪ್ರದರ್ಶನಗೊಂಡಿತು.
ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷರಾದ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮಾತೃ ಸಂಸ್ಕೃತಿ ಸೇವಾ ಸಮಿತಿಯ ಸದಸ್ಯರು, ವಿದ್ಯಾಲಯದ ಅಧ್ಯಾಪಿಕೆಯರು, ಮಾತೆಯರು ಮತ್ತು ವಿದ್ಯಾರ್ಥಿನಿಯರನ್ನೊಳಗೊಂಡ 108ಸದಸ್ಯರ ‘ಮೆಗಾ ತಿರುವಾದಿರ’ವು ನೋಡುಗರ ಕಣ್ಮನವನ್ನು ಸೆಳೆಯಿತು.
ಬ್ರಹ್ಮಚಾರಿಣಿ ದಿಶಾ ಚೈತನ್ಯ, ಚಿನ್ಮಯ ಮಿಷನಿನ ಸದಸ್ಯರು, ಪ್ರಾಂಶುಪಾಲರಾದ ಸುನಿಲ್ ಕುಮಾರ್ ಕೆ. ಸಿ, ಉಪ ಪ್ರಾಂಶುಪಾಲರಾದ ಪ್ರಶಾಂತ್ ಬೆಳಿಂಜ, ಮುಖ್ಯೋಪಾಧ್ಯಾಯಿನಿಯರಾದ ಪೂರ್ಣಿಮಾ ಎಸ್. ಆರ್. ಮತ್ತು ಸಿಂಧು ಶಶೀಂದ್ರನ್ ಉಪಸ್ಥಿತರಿದ್ದರು.
ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸಿದರು.
‘ಮೆಗಾ ತಿರುವಾದಿರ’ದಲ್ಲಿ ಭಾಗವಹಿಸಿದವರೆಲ್ಲರಿಗೂ ಕೇರಳ ಚಿನ್ಮಯ ಮಿಷನಿನ ಮುಖ್ಯಸ್ಥ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಅಧ್ಯಕ್ಷರಾದ ಸ್ವಾಮಿ ವಿವಿಕ್ತಾನಂದ ಸರಸ್ವತಿಯವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು.