ಕಮತಗಿ : ಮೇಘಮೈತ್ರಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ “ಶ್ರೀಮತಿ ಮಾಪಮ್ಮ ಎಸ್. ಹೊಸಮನಿ ದತ್ತಿ” ಪ್ರಶಸ್ತಿಗೆ ಶ್ರೀ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ‘ಹವೇಲಿ ದೊರೆಸಾನಿ’ ಕಥಾ ಸಂಕಲನ, ಮೇಘಮೈತ್ರಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ “ಡಾ. ಪ್ರಕಾಶ ಖಾಡೆ ಮೇಘಮೈತ್ರಿ ಕಥಾ ಸಾಹಿತ್ಯ ದತ್ತಿ” ಪ್ರಶಸ್ತಿಗೆ ಶಂಕರ ಬೈಚಬಾಳ ಇವರ ‘ಆಯ್ದ ಕಥೆಗಳು’ ಕಥಾ ಸಂಕಲನ ಹಾಗೂ ಮೇಘಮೈತ್ರಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ “ಡಾ. ವಿಜಯಕುಮಾರ ಕಟಗಿಹಳ್ಳಿಮಠ ಸಾಹಿತ್ಯ ದತ್ತಿ” ಪ್ರಶಸ್ತಿಗೆ ಲಕ್ಷ್ಮಣ ಬದಾಮಿ ಅವರ ‘ಮಾತಿಗಿಳಿದ ಚಿತ್ರ’ ಕೃತಿ ಆಯ್ಕೆಯಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ರಮೇಶ ಕಮತಗಿ ತಿಳಿಸಿದ್ದಾರೆ.
ಈ ಪ್ರಶಸ್ತಿ ಪ್ರದಾನವನ್ನು ದಿನಾಂಕ 08 ಜೂನ್ 2025ರ ಭಾನುವಾರದಂದು ಮೈಸೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಿರಿಯ ಸಾಹಿತಿಗಳು ಹಾಗೂ ಖ್ಯಾತ ವೈದ್ಯರಾದ ಡಾ. ಸಿ. ಶರತ್ ಕುಮಾರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀಡಿ ಗೌರವಿಸಲಾಗುವುದು. ಎಲ್ಲಾ ಸಾಹಿತ್ಯ ಪ್ರೇಮಿಗಳು ಹಾಗೂ ಕನ್ನಡ ಅಭಿಮಾನಿಗಳು ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿದ್ದಾರೆ.