ಕುಂದಾಪುರ : ಮೊಗೇರಿ ಅಡಿಗರ ಸಮಷ್ಟಿ ಬಳಗದ ವತಿಯಿಂದ ಕವಿಗಳ ಕವಿ ಗೋಪಾಲಕೃಷ್ಣ ಅಡಿಗರ ಹುಟ್ಟು ಪರಿಸರದ ಭಾಷೆ, ಬದುಕಿನ ಸೊಗಡನ್ನೊಳಗೊಂಡಿರುವ ಉತ್ತಮ ಪುಸ್ತಕಕ್ಕೆ ನೀಡಲಾಗುತ್ತಿರುವ ಮೊದಲ ಮೊಗೇರಿ ಸಮಷ್ಟಿ ವಾರ್ಷಿಕ ಪುಸ್ತಕ ಪುರಸ್ಕಾರಕ್ಕೆ ಕೆ. ಪುಂಡಲೀಕ ನಾಯಕ್ ಅವರ ‘ಭಾವ ಸ್ಮೃತಿ’ ಆತ್ಮಕಥನ ಆಯ್ಕೆ ಆಗಿದೆ ಎಂದು ಮೊಗೇರಿ ಅಡಿಗರ ಸಮಷ್ಟಿ ಬಳಗದ ಮುಖ್ಯಸ್ಥ ಎಂ. ಜಯರಾಮ ಅಡಿಗ ಇವರು ಮೊಗೇರಿ ಸ್ವಾಣಿ ಹಬ್ಬದಲ್ಲಿ ಪ್ರಕಟಿಸಿದರು. ಮೊಗೇರಿ ಸ್ವಾಣಿ ಹಬ್ಬದ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಕಮಲಶಿಲೆ ಪೂರ್ಣಿಮಾ ನಿರ್ದೇಶಕತ್ವದಲ್ಲಿ ಗೃಹಿಣೀ ಶಕ್ತಿ, ಮಕ್ಕಳ ಅಭಿವ್ಯಕ್ತಿ ಸರಣಿಯನ್ನು ಉದ್ಘಾಟಿಸಲಾಯಿತು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಶುಭ ಹಾರೈಸಿದರು.