ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಇದರ ರಂಗ ಅಧ್ಯಯನ ಕೇಂದ್ರ ಪ್ರಸ್ತುತ ಪಡಿಸುವ ‘ಮಾನ್ಸೂನ್ ರಂಗೋತ್ಸವ -2’ ದಿನಾಂಕ 09 ಮತ್ತು 10 ಆಗಸ್ಟ್ 2025ರಂದು ಸಂಜೆ ಗಂಟೆ 6-44ಕ್ಕೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ನಡೆಯಲಿದೆ.
ದಿನಾಂಕ 09 ಆಗಸ್ಟ್ 2025ರಂದು ಮಹೇಶ್ ದತ್ತಾನಿ ಇವರ ನಿರ್ದೇಶನದಲ್ಲಿ ‘ಯೋಗಿ ಮತ್ತು ಭೋಗಿ’ ನಾಟಕ ಪ್ರದರ್ಶನ ಹಾಗೂ ದಿನಾಂಕ 10 ಆಗಸ್ಟ್ 2025ರಂದು ತ್ರಿಶಾ ಶೆಟ್ಟಿ, ಕೃತಿಕಾ ವರ್ಮ, ಫೈಜಲ್ ಅಹ್ಮದ್, ಭವ್ಯ ಭಾರಧ್ವಾಜ್, ಸೌಮ್ಯ ಝಕಾರಿಯಾ, ಅಭಿನವ್ ಗ್ರೋವರ್ ಇವರ ನಿರ್ದೇಶನದಲ್ಲಿ ಮೂರು ಕಿರು ನಾಟಕಗಳು ಪ್ರದರ್ಶನಗೊಳ್ಳಲಿವೆ. ಎರಡೂ ದಿನ ಉಚಿತ ಪ್ರವೇಶವಾಗಿದ್ದು, ಯಾವುದೇ ಸಭಾ ಕಾರ್ಯಕ್ರಮ ಇರುವುದಿಲ್ಲ, ನಾಟಕ ಸರಿಯಾದ ಸಮಯಕ್ಕೆ ಪ್ರಾರಂಭವಾಗುತ್ತದೆ.