ಕುಳಾಯಿ : ಕುಳಾಯಿಯ ವಿಷ್ಣುಮೂತಿ೯ದೇವಸ್ಥಾನದಲ್ಲಿ ನಡೆಯುವ ಮಾಸಿಕ ಹುಣ್ಣಿಮೆಯ ಯಕ್ಷಗಾನ ತಾಳಮದ್ದಳೆ ಕಾಯ೯ಕ್ರಮದ ಅಂಗವಾಗಿ ‘ಇಂದ್ರಜಿತು’ ಪ್ರಸಂಗದ ತಾಳಮದ್ದಳೆ ದಿನಾಂಕ 29-09-2023ರ ಶುಕ್ರವಾರದಂದು ನಡೆಯಿತು.
ಕಾರ್ಯಕ್ರಮದಲ್ಲಿ ಅರ್ಥಧಾರಿಗಳಾಗಿ ಶ್ರೀರಾಮನಾಗಿ ಹಿರಿಯ ಹವ್ಯಾಸಿ ಅರ್ಥದಾರಿ ಶ್ರೀ ರಾಧಾಕೃಷ್ಣ ಭಟ್, ಇಂದ್ರಜಿತು ಪಾತ್ರದಲ್ಲಿ ಉದಯೋನ್ಮುಖ ಪ್ರತಿಭೆ ಶ್ರೀ ಚಂದ್ರಶೇಖರ ಕೊಡಿಪ್ಪಾಡಿ, ಹನುಮಂತನ ಪಾತ್ರದಲ್ಲಿ ಹಿರಿಯ ಹವ್ಯಾಸಿ ಅರ್ಥದಾರಿ ಹಾಗೂ ಪ್ರವಚನಕಾರ, ಶ್ರೀ ಮನೋಹರ ಕುಂದರ್ ಬಡಾ ಎರ್ಮಾಳು, ಲಕ್ಷ್ಮಣನಾಗಿ ಈ ಸಂಘದ ಸಂಚಾಲಕ ಹಾಗೂ ಹಿರಿಯ ಅರ್ಥದಾರಿಗಳಾದ ಶ್ರೀ ವಾಸುದೇವ ಆಚಾರ್ಯ ಕುಳಾಯಿ, ಮಾಯಾಸೀತೆ ಪಾತ್ರದಲ್ಲಿ ಮಹಿಳಾ ಯಕ್ಷಗಾನ ಸಂಘದ ಸದಸ್ಯೆ ಹಾಗೂ ನಿವೃತ್ತ ಕಾಲೇಜು ಉಪನ್ಯಾಸಕಿರಾಗಿರುವ ಶ್ರೀಮತಿ ಲಲಿತಾ ಭಟ್ ತಾಳ್ತಜೆ ಹಾಗೂ ವಿಭೀಷಣನ ಪಾತ್ರದಲ್ಲಿ ಯವ ಪ್ರತಿಭೆ ಮತ್ತು ರಂಗಭೂಮಿ ಕಲಾವಿದ ಶ್ರೀ ವೈಶಾಖ್ ಸಹಕರಿಸಿದರು. ಹಿಮ್ಮೇಳದಲ್ಲಿ ಹಿರಿಯ ಭಾಗವತರಾದ ಶ್ರೀ ದಯಾನಂದ ಕೋಡಿಕಲ್, ಚೆಂಡೆಯಲ್ಲಿ ಯುವ ಕಲಾವಿದ ಕಟೀಲು ಮೇಳದ ಮದ್ದಳೆಗಾರರಾದ ಶ್ರೀ ಸೂರಜ್ ಆಚಾರ್ಯ ಮುಲ್ಕಿ,ಮದ್ದಳೆಯಲ್ಲಿ ಶ್ರೀ ಎಸ್.ಎನ್.ಭಟ್ ಬಾಯಾರು ಹಾಗೂ ಚಕ್ರತಾಳದಲ್ಲಿ ಸುರೇಶ್ ಕಾಮತ್ ಅರ್ಥಧಾರಿಗಳಿಗೆ ಜೊತೆ ನೀಡಿದರು.
ಪಣಂಬೂರು ಕೇಂದ್ರೀಯ ವಿದ್ಯಾಲಯದ ನಿವೃತ್ತ ಗ್ರಂಥ ಪಾಲಕರಾದ ಎಸ್. ಏನ್ ಭಟ್ ಬಾಯಾರು ಇವರ ಸಂಯೋಜನೆ ಮತ್ತು ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ವಿಷ್ಣುಮೂತಿ೯ ದೇವಸ್ಥಾನದ ಸಂಘಟನಾ ಉಸ್ತುವಾರಿ ಶ್ರೀ ರಾಘವೇಂದ್ರ ಹೆಬ್ಬಾರ್ ಕುಳಾಯಿ ಸಹಕರಿಸಿದರು.