ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆ ದಿನಾಂಕ 05 ಜನವರಿ 2026ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ರಾಜಗೋಪುರದಲ್ಲಿ ‘ಅತಿಕಾಯ ಮೋಕ್ಷ’ ತಾಳಮದ್ದಳೆಯೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಎಲ್.ಯನ್. ಭಟ್ ಬಟ್ಯಮೂಲೆ, ನಿತೀಶ್ ಎಂಕಣ್ಣ ಮೂಲೆ, ಮುರಳೀಧರ ಕಲ್ಲೂರಾಯ ಕುಂಜೂರು ಪಂಜ, ಶ್ರೀಪತಿ ಭಟ್ ಉಪ್ಪಿನಂಗಡಿ, ಶರಣ್ಯ ನೆತ್ತರಕೆರೆ, ಸಮರ್ಥ ವಿಷ್ಣು ಕಡಂಬಳಿಕೆ, ಹರೀಶ್ ಕೃಷ್ಣ ಪುಣಚ ಸಹಕರಿಸಿದ್ದರು. ಮುಮ್ಮೇಳದಲ್ಲಿ ಶ್ರೀರಾಮ (ಭಾಸ್ಕರ್ ಬಾರ್ಯ), ರಾವಣ (ಹರಿಣಾಕ್ಷಿ ಜೆ. ಶೆಟ್ಟಿ), ಅತಿಕಾಯ (ಗುಂಡ್ಯಡ್ಕ ಈಶ್ವರ ಭಟ್ ಮತ್ತು ಗುಡ್ಡಪ್ಪ ಬಲ್ಯ), ವಿಭೀಷಣ (ಲಕ್ಷ್ಮಿಕಾಂತ ಹೆಗಡೆ ಪುತ್ತೂರು) ಸಹಕರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ, ಟಿ. ರಂಗನಾಥ ರಾವ್ ವಂದಿಸಿದರು.
