ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರಿಂದ ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ದಿನಾಂಕ 20 ಜನವರಿ 2026ರಂದು ಮಾಸಿಕ ತಾಳಮದ್ದಲೆ ಕಾಸರಗೋಡು ಸುಬ್ರಾಯ ಪಂಡಿತ ವಿರಚಿತ ‘ರಾವಣ ವಧೆ’ ಎಂಬ ಆಖ್ಯಾನದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಕುಸುಮಾಕರ ಆಚಾರ್ಯ ಹಳೆನೇರಂಕಿ ಹಾಗೂ ಚೆಂಡೆ ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಮುರಲೀಧರ ಕಲ್ಲೂರಾಯ, ಅನೀಶ ಕೃಷ್ಣ ಪುಣಚ ಭಾಗವಹಿಸಿದರು. ಶ್ರೀರಾಮನಾಗಿ ಗುಡ್ಡಪ್ಪ ಬಲ್ಯ, ರಾವಣನಾಗಿ ಗುಂಡ್ಯಡ್ಕ ಈಶ್ವರ ಭಟ್, ಮಂಡೋದರಿಯಾಗಿ ವಿ.ಕೆ. ಶರ್ಮ ಅಳಿಕೆ, ವಿಭೀಷಣನಾಗಿ ದುಗ್ಗಪ್ಪ ಯನ್, ಮಾತಲಿಯಾಗಿ ಬಡೆಕ್ಕಿಲ ಚಂದ್ರಶೇಖರ ಭಟ್ ಪಾತ್ರಪೋಷಣೆ ಮಾಡಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ದೇವಳದ ಸಂಚಾಲಕ ಮೖರ್ಕಳ ವೆಂಕಟಕೃಷ್ಣ ಭಟ್ ಪ್ರಾಯೋಜಿಸಿದರು. ದುಗ್ಗಪ್ಪ ಯನ್. ಸ್ವಾಗತಿಸಿ, ಭಾಸ್ಕರ ಬಾರ್ಯ ವಂದಿಸಿದರು.
