ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರಿಂದ ಬನ್ನೂರಿನ ಶ್ರೀ ಬಲಮುರಿ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಮಾಸಿಕ ತಾಳಮದ್ದಲೆ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ಶರಸೇತು ಬಂಧನ’ ಪ್ರಸಂಗದೊಂದಿಗೆ ದಿನಾಂಕ 21 ಅಕ್ಟೋಬರ್ 2025ರ ಮಂಗಳವಾರ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ನಿತೀಶ ಕುಮಾರ್ ಎಂಕಣ್ಣಮೂಲೆ ಹಾಗೂ ಚೆಂಡೆ ಮದ್ದಲೆಗಳಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪರೀಕ್ಷಿತ್ ಹಂದ್ರಟ್ಟ, ಸಮರ್ಥ ವಿಷ್ಣು ಈಶ್ವರಮಂಗಲ ಭಾಗವಹಿಸಿದರು. ಅರ್ಜುನನಾಗಿ ಭಾಸ್ಕರ ಬಾರ್ಯ ಹಾಗೂ ಮಾಂಬಾಡಿ ವೇಣುಗೋಪಾಲ ಭಟ್, ಹನುಮಂತನಾಗಿ ಗುಡ್ಡಪ್ಪ ಬಲ್ಯ, ವೃದ್ಧ ವಿಪ್ರನಾಗಿ ದುಗ್ಗಪ್ಪ ಯನ್., ಶ್ರೀರಾಮನಾಗಿ ಬಡೆಕ್ಕಿಲ ಚಂದ್ರಶೇಖರ ಭಟ್ ಪಾತ್ರಗಳನ್ನು ಪೋಷಿಸಿದರು. ಭಾಸ್ಕರ ಬಾರ್ಯರ ಸಂಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ನಿಡುಗಳ ಕೃಷ್ಣ ಭಟ್ ಜೋಡುಕಟ್ಟೆ ಪ್ರಾಯೋಜಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಇತ್ತೀಚೆಗೆ ಅಗಲಿದ ನಾಡಿನ ಹೆಸರಾಂತ ಭಾಗವತ ದಿನೇಶ ಅಮ್ಮಣ್ಣಾಯ ಇವರಿಗೆ ನುಡಿ ನಮನ ಸಲ್ಲಿಸಲಾಯಿತು. ಭಾಸ್ಕರ ಬಾರ್ಯ ಹಾಗೂ ಗುಡ್ಡಪ್ಪ ಬಲ್ಯ ಅಗಲಿದ ಭಾಗವತರ ಗುಣಗಾನ ಮಾಡಿದರು. ಭಾಸ್ಕರ ಬಾರ್ಯ ಸ್ವಾಗತಿಸಿ, ವೇಣುಗೋಪಾಲ ಭಟ್ ವಂದಿಸಿದರು.